ಪ್ರಮುಖ ಸುದ್ದಿ

ಹುಣಸಗಿ, ವಡಗೆರೆ, ಗುರುಮಿಠ್ಕಲ್ ಸೇರಿ 49 ಹೊಸ ತಾಲೂಕು ರಚನೆ -ಸಿಎಂ

ಬೆಂಗಳೂರು: ಕರ್ನಾಟಕದ 21 ಜಿಲ್ಲೆಗಳಲ್ಲಿ ಜನವರಿಯಿಂದ 49 ಹೊಸ ತಾಲೂಕುಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಬೆಂಗಳೂರಿನಲ್ಲಿ ಸಿಎಂ ಸಿದ್ದ್ಧರಾಮಯ್ಯ ಹೇಳಿದ್ದಾರೆ. 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಪ್ರಕಟಿಸಿದ್ದು, ಅವುಗಳ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
ಜನೇವರಿ ಮೊದಲ ಹಂತದಲ್ಲಿಯೇ ಹೊಸ ತಾಲೂಕುಗಳು ತಾಲೂಕು ಆಡಳಿತ ನಡೆಸಲಿವೆ.
ಪರಿಣಾಮಕಾರಿಯಾಗಿ , ಸಮರ್ಥವಾಗಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಆಡಳಿತ ನಡೆಸುವ ಉದ್ದೇಶದಿಂದ ಸರಕಾರ ಹೊಸ ತಾಲೂಕು ರಚನೆಗೆ ಮುಂದಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಾರ್ಯ ಪ್ರವೃತ್ತರಾಗಲು ಸೂಚಿಸಲಾಗಿದೆ ಎಂದರು.
ನೂತನ ತಾಲೂಕುಗಳ ಪಟ್ಟಿ ಇಲ್ಲಿದೆ.

ಬಾಗಲಕೋಟೆ – ಗುಳೇದ ಗುಡ್ಡ, ರಬಕವಿ, ಬನಹಟ್ಟಿ, ಇಳಕಲ್

ಬೆಳಗಾವಿ – ನಿಪ್ಪಾಣಿ, ಮೂಡಲಗಿ, ಕಾಗವಾಡ
ಚಾಮರಾಜನಗರ – ಹನೂರು
ದಾವಣಗೆರೆ – ನ್ಯಾಮತಿ

ಬೀದರ್ – ಚಿಟಗುಪ್ಪ, ಹುಲಸೂರು, ಕಮಲಾನಗರ
ಬಳ್ಳಾರಿ – ಕುರುಗೋಡು, ಕೊಟ್ಟೂರು, ಕಂಪ್ಲಿ
ಧಾರವಾಡ – ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ
ಗದಗ – ಗಜೇಂದ್ರಗಡ, ಲಕ್ಷ್ಮೇಶ್ವರ

ಕಲಬುರಗಿ – ಕಾಳಗಿ, ಕಮಲಾಪುರ, ಯಡ್ರಾಮಿ, ಶಹಬಾದ್

ಯಾದಗಿರಿ – ಹುಣಸಗಿ, ವಡಗೆರ, ಗುರುಮಿಟ್ಕಲ್

ಕೊಪ್ಪಳ – ಕುಕನೂರು, ಕನಕಗಿರಿ, ಕಾರಟಗಿ
ರಾಯಚೂರು – ಮಸ್ಕಿ, ಸಿರಾವರ

ಉಡುಪಿ – ಬ್ರಹ್ಮಾವರ, ಕಾಪು, ಬೈಂದೂರು
ದಕ್ಷಿಣ ಕನ್ನಡ – ಮೂಡಬಿದರೆ, ಕಡಬ
ಬೆಂಗಳೂರು ನಗರ – ಯಲಹಂಕ
ವಿಜಯಪುರ – ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ
ಹಾವೇರಿ – ರಟ್ಟಿಹಳ್ಳಿ

ಮೈಸೂರು – ಸರಗೂರು
ಚಿಕ್ಕಮಗಳೂರು – ಅಜ್ಜಂಪುರ
ಉತ್ತರ ಕನ್ನಡ – ದಾಂಡೇಲಿ
ಕೋಲಾರ – ಕೆಜಿಎಫ್

Related Articles

Leave a Reply

Your email address will not be published. Required fields are marked *

Back to top button