ಪ್ರಮುಖ ಸುದ್ದಿ
ಚರ್ಚಗಳಲ್ಲಿ ಪ್ರಾರ್ಥನೆಗೆ ಯಾವುದೇ ನಿರ್ಬಂಧವಿಲ್ಲ – ಬೊಮ್ಮಾಯಿ
ಬಹಿರಂಗ ಪಾರ್ಟಿಗೆ ಅವಕಾಶವಿಲ್ಲ – ಸಿಎಂ ಬೊಮ್ಮಾಯಿ
ಸುವರ್ಣಸೌಧಃ ಹೊಸ ವರ್ಷ ಆಚರಣೆಗೆ ಬೆಂಗಳೂರ ನಗರ, ಬ್ರಿಗೇಡ್, ಎಂ.ಜಿ.ರಸ್ತೆ ಇತರಡೆ ಗುಂಪು ಸೇರುವಂತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುವರ್ಣಸೌಧದ ಬಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಹೊಸ ವರ್ಷ ಆಗಮನಕ್ಕಾಗಿ ಹೊರಗಡೆ, ವಿಶೇಷ ಪಾರ್ಟಿಗಳನ್ನು ಆಯೋಜಿಸುವಂತಲ್ಲ. ಮತ್ತು ಅಪಾರ್ಟ್ಮೆಂಟ್ ನಲ್ಲೂ ಡಿಜೆ ಹಚ್ಚುವ ಮೂಲಕ ಗುಂಪು ಗುಂಪಾಗಿ ಸೇರುವಂತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನೂ ಕ್ರಿಸ್ ಮಸ್ ಆಚರಣೆಗೂ ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸುವಂತಿಲ್ಲ. ಆದರೆ ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ನಿರ್ಬಂಧವಿಲ್ಲ.
ಕೋವಿಡ್ ಹಿನ್ನೆಲೆ ಸರ್ಕಾರ ತಜ್ಞರ ಸಲಹಾ ಮೇರೆಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ನಿಯಮನುಸಾರ ಎಲ್ಲರೂ ನಡೆದುಕೊಳ್ಳುವ ಮೂಲಕ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.