ಪ್ರಮುಖ ಸುದ್ದಿ
ಇನ್ಮುಂದೆ ಬೆಂಗಳೂರಲ್ಲಿ ಹೊಸ ವರ್ಷಾಚಾರಣೆ ಕಷ್ಟಸಾಧ್ಯ.?
ಇನ್ಮುಂದೆ ಹೊಸ ವರ್ಷಾಚಾರಣೆ ಕಷ್ಟಸಾಧ್ಯವಾ.?
ಬೆಂಗಳೂರಃ ಪ್ರತಿ ಹೊಸ ವರ್ಷ ಆಚರಣೆಗಾಗಿ ಸರ್ಕಾರ, ಪೊಲೀಸ್ ಇಲಾಖೆ ಎಷ್ಟೆ ಎಚ್ಚೆತ್ತುಕೊಂಡು ಬಂದೋಬಸ್ತ್ ಮಾಡಿದ್ದರೂ ಆಚರಣೆ ವೇಳೆ ಗಲಾಟೆ, ಕಾಮುಕರ ಕಾಟ ತಪ್ಪುತ್ತಿಲ್ಲ.
ನಿನ್ನೆ ರಾತ್ರಿ ವೇಳೆ ನೂತನ ವರ್ಷಾ ಆಚರಣೆ ಹಿನ್ನೆಲೆ ಎಂ.ಜಿ.ರೋಡ್. ಬ್ರಿಗೇಡ್ ರಸ್ತೆ ಸೇರಿದಂತೆ ಕಂಟೋನ್ಮಂಟ್, ಚರ್ಚ್ ಸ್ಟ್ರೀಟ್, ರಸ್ತೆ ವ್ಯಾಪ್ತಿ ಜನ ಜಂಗುಳಿಯೇ ಸೇರುತ್ತದೆ.
ರಾಜ್ಯ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರೂ ಕಾಮುಕರು ತಮ್ಮ ಚಟ ಬಿಡುವದಿಲ್ಲ. ಯುವತಿಯರನ್ನು ಚುಡಾಯಿಸುವದು, ಮೈ ಮುಟ್ಟುವಂಥ ಘಟನೆಗಳು ಮರುಕಳಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಬೇಕಾ.? ಬೇಡ್ವಾ.? ಎಂಬ ಚರ್ಚೆ ನಡೆಯುತ್ತಿದೆ.
ಈ ಕುರಿತು ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಬರುವ ದಿನಗಳಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗುವದು ಎಂದು ಅವರು ತಿಳಿಸಿದ್ದಾರೆ.