ಪ್ರಮುಖ ಸುದ್ದಿ

ರಾಜೂಗೌಡ, ರೇವೂರ, ಪಾಟೀಲ್ ಸೇರಿದಂತೆ ವಿವಿಧ ನಿಗಮಗಳ ಅಧ್ಯಕ್ಷರಾಗಿ‌ 24 ಶಾಸಕರ ನೇಮಕ

ಬೆಂಗಳೂರಃ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಸಿಎಂ ಯಡಿಯೂರಪ್ಪ ನವರು ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರುಗಳನ್ನಾಗಿ 24 ಶಾಸಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಜಿಲ್ಲೆಗೆ 2 ನಿಗಮ ಮಂಡಳಿಗಳನ್ನು ನೀಡಿದ್ದು, ಸೇಡಂ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ಅವರನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸುವ ಮೂಲಕ ಈ ಭಾಗದ ವೀರಶೈವ ಸಮಾಜದವರಲ್ಲಿ ಸಮಾಧಾನ ಮೂಡಿಸಿದ್ದಾರೆ.

ಅಲ್ಲದೆ ಯಾದಗಿರಿ ಜಿಲ್ಲೆಯಲ್ಲಿ ಸುರಪುರ ಶಾಸಕ ರಾಜೂಗೌಡ (ನರಸಿಂಹ ನಾಯಕ) ಅವರನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರನ್ನಾಗಿಸಿದರೆ, ಅದೇ ಸಮುದಾಯದ ರಾಯಚೂರ ಜಿಲ್ಲೆಯ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರನ್ನು ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ಇತ್ತೀಚೆಗಷ್ಟೆ ಉಪಚುನಾವಣೆಯಲ್ಲಿ ಪರಾಭವ ಹೊಂದಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ. ಪಿ.ಯೋಗೇಶ್ವರ್ ಅವರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು. ಹೀಗಾಗಿ ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಳ್ಳುವ ಮುನ್ನವೇ ಸಿಎಂ ಯಡಿಯೂರಪ್ಪ ಎಲ್ಲರಿಗೂ ಸಮಾಧಾನ ಪಡಿಸುವ ನಿಟ್ಟಿನಲ್ಲಿ 24 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರ ಸ್ಥಾನಗಳನ್ನ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.

ನಿಗಮ ಮಂಡಳಿಗಳಿಗೆ ನೇಮಕಗೊಂಡ ಶಾಸಕರ ಹೆಸರು ಇಂತಿದೆ.
ಅರಗ ಜ್ಞಾನೇಂದ್ರ – ಗೃಹ ಮಂಡಳಿ
ಎಂ.ಚಂದ್ರಪ್ಪ – ಕೆಎಸ್ ಆರ್ಟಿಸಿ.
ನರಸಿಂಹ ನಾಯಕ(ರಾಜೂಗೌಡ) – ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
ಎಂ.ಪಿ ಕುಮಾರಸ್ವಾಮಿ – ಕರ್ನಾಟಕ ಮಾರುಕಟ್ಟೆ ಸಲಹೆಗಾರ ಮತ್ತು ಏಜೆನ್ಸಿ ಲಿಮಿಟೆಡ್.
ಎ ಎಸ್ ಪಾಟೀಲ್(ನಡಹಳ್ಳಿ) – ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ.
ಹೆಚ್ ಹಾಲಪ್ಪ – ಎಂ ಎಸ್ ಐ ಎಲ್.
ಮಾಡಳು ವಿರುಪಾಕ್ಷಪ್ಪ – ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ.
ಜಿ ಹೆಚ್ ತಿಪ್ಪಾರೆಡ್ಡಿ- ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ.
ಶಿವನಗೌಡ ನಾಯಕ – ರಸ್ತೆ ಅಭಿವೃದ್ಧಿ ನಿಗಮ.
ಕಳಕಪ್ಪ ಬಂಡಿ – ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ.
ಪರಣ್ಣ ಮುನವಳ್ಳಿ – ರಾಜ್ಯ ಹಣಕಾಸು ಸಂಸ್ಥೆ.
ಸಿದ್ದು ಸವದಿ – ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ.
ಪ್ರೀತಂಗೌಡ – ಜಂಗಲ್ ಲಾಡ್ಜ್ ರೇಸಾರ್ಟ್.
ರಾಜಕುಮಾರ ತೆಲ್ಕೂರು – ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ.
ದತ್ತಾತ್ರೇಯ ಚಂದ್ರಶೇಖರ್ ಪಾಟೀಲ್ ರೇವೂರ್- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ.
ಶAಕರ್ ಪಾಟೀಲ್ ಮುನೇನಕೊಪ್ಪ- ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ.
ಹೆಚ್. ನಾಗೇಶ್- ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿನ ನಿಗಮ.
ಎಸ್.ವಿ. ರಾಮಚಂದ್ರ- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ.
ನೆಹರು ಓಲೆಕಾರ್ – ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ.
ಐಹೊಳೆ ಧುರ್ಯೊಧನ – ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ.
ಲಾಲಾಜಿ ಮೆಂಡನ್ – ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಬಸವರಾಜ್ ದಡೆಸೂಗುರು – ರಾಜ್ಯ ಸಮಾಜಕಲ್ಯಾಣ ಮಂಡಳಿ.
ಎಸ್ ಶಿವರಾಜ್ ಪಾಟೀಲ್ – ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ.
ಸಿ ಎಸ್ ನಿರಂಜನಕುಮಾರ್ – ರಾಜ್ಯ ಅರಣ್ಯಮಂಡ.ಳಿಗಾರಿಕಾ ಅಭಿವೃದ್ಧಿ ನಿಗಮ.

Related Articles

Leave a Reply

Your email address will not be published. Required fields are marked *

Back to top button