ಪ್ರಮುಖ ಸುದ್ದಿ
ನೈಟ್ ಕರ್ಫ್ಯೂ ಜಾರಿಃ ಬಸ್ ಸಂಚಾರ ಸ್ಥಗಿತ, ಹೊಟೇಲ್, ರೆಸ್ಟೋರೆಂಟ್ 9 ಗಂಟೆಗೆ ಬಂದ್
ನೈಟ್ ಕರ್ಫ್ಯೂ ಜಾರಿಃ ಬಸ್ ಸಂಚಾರ ಸ್ಥಗಿತ, ಹೊಟೇಲ್, ರೆಸ್ಟೋರೆಂಟ್ 9 ಗಂಟೆಗೆ ಬಂದ್
ಬೆಂಗಳೂರಃ ಕೊರೊನಾ ರೂಪಾಂತರ ಹೊಸ ವೈರಸ್ ಆತಂಕ ಸೃಷ್ಟಿಸಿದ್ದು, ಆ ಹಿನ್ನೆಲೆ ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸಿ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ 9 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಇರಲಿದೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರಾತ್ರಿ 9 ರನಂತರ ಯಾವುದೇ ಬಸ್, ವಾಹನಗಳ ಸಂಚಾರ ಇರುವದಿಲ್ಲ. ಅಲ್ಲದೆ ಹೊಟೇಲ್, ರೆಸ್ಟೋರೆಂಟ್ ಗಳು ಬಂದ್ ಆಗಲಿವೆ. ವ್ಯಾಪಾರ ವಹಿವಾಟಿಗೆ ಅವಕಾಶ ಇರುವದಿಲ್ಲ. ಅಗತ್ಯ ವಸ್ತುಗಳ ಸಾಗಾಣಿಕೆ ಮಾಡುವ ವಾಹನಗಳಿಗೆ ಮಾತ್ರ ಸಂಚಾರ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಸಂಜೆಯೊಳಗೆ ನೈಟ್ ಕರ್ಫ್ಯೂ ಜಾರಿ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.