Homeಅಂಕಣಪ್ರಮುಖ ಸುದ್ದಿ

ರಾತ್ರಿ ಯಾವ ಸಮಯಕ್ಕೆ ಊಟ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು?

ರಾತ್ರಿ ಬೇಗ ಊಟ ಮಾಡು ಅಂತ ನಮ್ಮ ಹಿರಿಯರು ಆಗಾಗ ಹೇಳುವುದನ್ನು ನೀವು ಗಮನಿಸಿರಬಹುದು. ಆದರೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಪರಿಸ್ಥಿತಿಗಳು ಮತ್ತು ಸಮಯದ ಕಾರಣದಿಂದಾಗಿ ಬಹುತೇಕರು ತಡವಾಗಿ ತಿನ್ನುತ್ತಾರೆ. ಆದರೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಹಾಗಾದರೆ, ರಾತ್ರಿ ಊಟ ಮಾಡಲು ಸರಿಯಾದ ಸಮಯ ಎಷ್ಟು? ತಜ್ಞರ ಪ್ರಕಾರ ರಾತ್ರಿ 7 ಗಂಟೆಗೂ ಮೊದಲು ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಫಿಟ್ನೆಸ್ ಕಾಪಾಡಿಕೊಳ್ಳುವ ಅನೇಕ ಜನರು ರಾತ್ರಿ 7 ಗಂಟೆಗೂ ಮೊದಲು ಊಟ ಮಾಡುತ್ತಾರೆ. ಈ ಸಮಯದಲ್ಲಿ ತಿನ್ನುವುದರಿಂದ ದೇಹವು ಸಂಪೂರ್ಣವಾಗಿ ಬದಲಾಗುತ್ತದೆ. ಪ್ರಪಂಚದಾದ್ಯಂತ ಪೌಷ್ಟಿಕತಜ್ಞರು ತಡರಾತ್ರಿ ತಿನ್ನುವುದನ್ನು ವಿರೋಧಿಸುತ್ತಾರೆ. ಆದಷ್ಟು ಬೇಗ ತಿನ್ನುವ ಅಭ್ಯಾಸ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಊಟದ ಸಮಯವು ನಿಮ್ಮ ತೂಕ ನಿಯಂತ್ರಣ, ಚಯಾಪಚಯ ನಿಯಂತ್ರಣ, ಹೃದಯ ಬಡಿತ ಮತ್ತು ನಿದ್ರೆಯ ಚಕ್ರದ ಮೇಲೆ ಪರಿಣಾಮ ಬೀರುತ್ತದೆ.

ತೂಕ ನಷ್ಟ, ಉತ್ತಮ ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯಕ್ಕಾಗಿ ಆರೋಗ್ಯ ತಜ್ಞರು ಬೇಗ ಊಟ ಮಾಡಲು ಶಿಫಾರಸು ಮಾಡುತ್ತಾರೆ. ನೀವು ತಡರಾತ್ರಿಯಲ್ಲಿ ತಿಂದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ನೀವು ತಿನ್ನುವ ಎಲ್ಲವನ್ನೂ ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯವನ್ನು ಹೊಂದಿರುವುದಿಲ್ಲ. ಇದು ಅಜೀರ್ಣ ಅಥವಾ ಎದೆಯುರಿಯನ್ನು ಉಂಟುಮಾಡಬಹುದು. ಹೀಗಾಗಿ ಊಟ ಮತ್ತು ನಿದ್ರೆಯ ನಡುವೆ ಸಾಕಷ್ಟು ಅಂತರವಿರಬೇಕು. ರಾತ್ರಿ ತಡವಾಗಿ ತಿಂದರೆ ಜೀರ್ಣಕ್ರಿಯೆ ಚೆನ್ನಾಗಿರುವುದಿಲ್ಲ ಮತ್ತು ನಿದ್ದೆಯೂ ಬರುವುದಿಲ್ಲ. ನೀವು ಎಷ್ಟು ಬೇಗ ತಿನ್ನುತ್ತೀರೋ ಅಷ್ಟು ನಿಮ್ಮ ದೇಹವು ಆಹಾರವನ್ನು ಹೀರಿಕೊಳ್ಳುತ್ತದೆ.

ಇದರಿಂದ ಚೆನ್ನಾಗಿ ನಿದ್ದೆ ಮಾಡಬಹುದು. ಅಲ್ಲದೆ, ರಾತ್ರಿಯ ನಿದ್ದೆಯು ಮರುದಿನ ನಿಮ್ಮನ್ನು ಚೈತನ್ಯದಿಂದಿರಿಸುತ್ತದೆ. ರಾತ್ರಿ ಬೇಗ ಊಟ ಮಾಡುವುದರಿಂದ ಗ್ಯಾಸ್, ಅಸಿಡಿಟಿ ಅಥವಾ ಎದೆಯುರಿ ಮುಂತಾದ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ಯಾವಾಗಲೂ ತಮ್ಮ ಊಟದ ಸಮಯವನ್ನು ಗಮನಿಸಬೇಕು. ರಾತ್ರಿಯ ಊಟವನ್ನು ಬೇಗ ತಿನ್ನುವುದರಿಂದ ಆಗುವ ದೊಡ್ಡ ಪ್ರಯೋಜನವೆಂದರೆ ತೂಕ ಇಳಿಕೆ. ನಿದ್ರೆಯ ಸಮಯದಲ್ಲಿ ದೇಹದ ಕೊಬ್ಬನ್ನು ಶಕ್ತಿಗಾಗಿ ಬಳಸಲಾಗುತ್ತದೆ. ಹೀಗಾಗಿ ಕೊಬ್ಬು ಕಳೆದುಕೊಳ್ಳುತ್ತದೆ. ತಡರಾತ್ರಿಯಲ್ಲಿ ತಿಂದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ತೂಕ ಹೆಚ್ಚಾಗಬಹುದು. ಇನ್ನು ಮಲಗುವ ಸಮಯ ಮತ್ತು ರಾತ್ರಿಯ ಊಟದ ನಡುವೆ ಎರಡು ಗಂಟೆಗಳ ಅಂತರವಿರಬೇಕು. ಮಧ್ಯರಾತ್ರಿ ತಿನ್ನುವವರು ಅಧಿಕ ರಕ್ತದೊತ್ತಡದಿಂದ ಬಳಲುವ ಸಾಧ್ಯತೆ ಹೆಚ್ಚು. ಅಲ್ಲದೆ, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button