Homeಜನಮನಪ್ರಮುಖ ಸುದ್ದಿ

ದೇಶದ ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ : ನಿತಿನ್ ಗಡ್ಕರಿ

ದೆಹಲಿ: 2024ರ ಲೋಕಸಭಾ ಚುನಾವಣೆ  ಸಂದರ್ಭದಲ್ಲಿ ರಾಜಕೀಯ ನಾಯಕರೊಬ್ಬರು ನನ್ನನ್ನು ಪ್ರಧಾನಿಹುದ್ದೆಗೆ ಬೆಂಬಲಿಸುವ ಭರವಸೆ ನೀಡಿದ್ದರು. ಆದರೆ ನಾನು ಆ ಆಫರ್‌ ತಿರಸ್ಕರಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಬಹಿರಂಗಪಡಿಸಿದ್ದಾರೆ.

ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನನಗೆ ಈಗಲೂ ಒಂದು ಘಟನೆ ನೆನಪಿದೆ. ನಾನು ಯಾರ ಹೆಸರನ್ನೂ ಉಲ್ಲೇಖಿಸಲ್ಲ. ಆದ್ರೆ ಆ ವ್ಯಕ್ತಿ ʻನೀವು ಪ್ರಧಾನಿಯಾಗಲು (PM Post) ಬಯಸಿದ್ರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆʼ ಎಂದು ಹೇಳಿದ್ದರು. ನಾನು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಅಂತಹ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲವೆಂದೂ ಹೇಳಿದೆ ಎಂದು ಹೇಳಿದ್ದಾರೆ. 2024 ಮತ್ತು 2019ರ ಲೋಕಸಭೆ ಚುನಾವಣೆ ವೇಳೆ ನಿತಿನ್ ಗಡ್ಕರಿ ಅವರ ಹೆಸರು ಪ್ರಧಾನಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿ ಎಂದು ಚರ್ಚೆಗೆ ಬಂದಿತ್ತು. ಈ ವರ್ಷದ  ಸಾರ್ವತ್ರಿಕ ಚುನಾವಣೆಗೆ ಮುನ್ನ ಇಂಡಿಯಾ ಟುಡೆಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಂತರ ನರೇಂದ್ರ ಮೋದಿಯ ನಂತರ ಪ್ರಧಾನಿಯಾಗಲು ಮೂರನೇ ಅತ್ಯಂತ ಸೂಕ್ತ ನಾಯಕ ಎಂದು ಶ್ರೇಯಾಂಕ ನೀಡಿತ್ತು. 2019ರಲ್ಲಿಯೂ ಪ್ರಧಾನಿ ಹುದ್ದೆಗೆ ಹೆಸರು ಕೇಳಿಬಂದಿತ್ತು 2019ರಲ್ಲಿ ಕೂಡ ಇದೇ ರೀತಿಯ ಚರ್ಚೆಗಳು ನಡೆದಾಗ ಗಡ್ಕರಿ ತಿರಸ್ಕರಿಸಿದ್ದರು. 2019 ರಲ್ಲಿ, ಗಡ್ಕರಿ ಅವರು ಭಾರತದ ಪ್ರಧಾನಿ ಹುದ್ದೆಯು ನರೇಂದ್ರ ಮೋದಿ ಎಂಬ ಸಮರ್ಥರ ಕೈಯಲ್ಲಿದೆ. ನಾವೆಲ್ಲರೂ ಅವರಿಗೆ ಬೆಂಬಲ ನೀಡಲು ಅವರ ಹಿಂದೆ ಇದ್ದೇವೆ ಎಂದಿದ್ದರು.

Related Articles

Leave a Reply

Your email address will not be published. Required fields are marked *

Back to top button