ಕಾವ್ಯಮಹಿಳಾ ವಾಣಿ
ನಿನ್ನ ಗೋಳ ಕೇಳುವರ್ಯಾರು..?
ಹುರುಪಿರಲಿ ಜೀವನಕೆ
ನಿನ್ನ ಗೋಳ ಕೇಳುವರ್ಯಾರು..?
ಸಂಜೆಯಾದರೆ ಪಂಜನಿಡಿಯಲು ಅಂಜಿ
ಆರಿರುವ ಮನದೊಲೆಗೆ ಹುರಿಯಾಕಲು ಅಳುಕಿ
ತಮ್ಮಾತ್ಮ ಭಾವನೆಗೆ ನವಕಾಲೀನ ಬಂಧನಗೈದು
ನೈಜ ಲೋಕದಲ್ಲಿ ಕೃತಕ ಜೀವನ ನಡೆಸುತ್ತಿರುವ
ಹೆಡ್ಡರ ನಡುವೆ ನಿನ್ನ ಗೋಳ ಕೇಳುವರ್ಯಾರು?
ಜೀವನದ ಜೋಳಿಗೆಯ ಕ್ಷಣಿಕ ಸುಖಕ್ಕೆ ಅಡವಿಟ್ಟು
ಮನ್ನಣೆಯ ಮರ ಕಡಿದು ಉತ್ಸವಾಗ್ನಿಯಲಿ ಸುಟ್ಟು
ಜೀವವಿಲ್ಲದ ಜೀವನಕೆ ರಂಗು ತುಂಬುವಂತೆ ನಟಿಸಿ
ನಂಜನೀವ ನರನ ಹೆಸರನು ಪ್ರತಿನಿತ್ಯವೂ ಪಠಿಸಿ
ಸಮಷ್ಟ ಸೃಷ್ಟಿಯೊಳು ದೃಷ್ಟಿ ಹೀನರಾಗಿರುವವರ
ನಡುವೆ,ಇಲ್ಲಿ ನಿನ್ನ ಗೋಳ ಕೇಳುವರ್ಯಾರು?
ಮನನಡುವಣ ಮರ ಚಿಗುರಿಸೊ ಮಾಲಿ ನಿನಗಿ
ಮುಳ್ಳದ ಲಯ ಸುಡುವ ಜ್ವಾಲಾಗ್ನಿಯನು ಕೂಗಿ
ಸಂಭವಿಸುವ ಶುಭಭವಕೆ ಮುಂಬಾಗಿಲಾಗು
ಪರರ ಗೋಳ ಕೇಳುವ ಕರುಣಾಮಯಿ ನೀನಾಗು.
–ವಿಕಾಸಾ