ಪ್ರಮುಖ ಸುದ್ದಿವಿನಯ ವಿಶೇಷ

ನಿತ್ಯೋತ್ಸವ ಕವಿಗೆ ವಿನಯವಾಣಿ ಅಕ್ಷರ ನಮನ

ಜೋಗದ ಸಿರಿ ಸೊಬಗು ಹೆಚ್ಚಿಸಿದ್ದ‌ ಕವಿ ನಿಸಾರ್ ಮರೆವು

ಕನ್ನಡದ ಪ್ರಮುಖ ಶ್ರೇಷ್ಠ ಕವಿ, ನಿತ್ಯೋತ್ಸವ ಕವಿ, ಸುಮಕೋಮಲ ಕವಿ, ಸಾಹಿತ್ಯದಲ್ಲಿ ಧಾರ್ಮಿಕ ಸಾಮರಸ್ಯ ಸಾರಿದ ಸಮನ್ವಯ ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ನಿಧನದಿಂದ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕ ಬಡವಾಗಿದೆ.

ಜೋಗದ ಸಿರಿ ಬೆಳಕಿನಲ್ಲಿ….. ಹಾಡಿನ ಮೂಲಕ ನಾಡು, ನುಡಿಯ ಸಾಂಸ್ಕೃತಿಕ ಪರಂಪರೆಯ ಸಿರಿ ಯನ್ನು ಹೆಚ್ಚಿಸಿದ ಕನ್ನಡದ ಸಾಹಿತ್ಯ ಚೇತನವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. – ನಿತ್ಯೋತ್ಸವ ಕವಿ ಎಂದೇ ನಾಡಿನ ಸಾರಸ್ವತ ಲೋಕದಲ್ಲಿ ಜನಪ್ರಿಯತೆ ಗಳಿಸಿದ ನಿಸಾರ್ ಅಹಮದ್ ಅವರು ನವೋದಯ, ನವ್ಯ ಮತ್ತು ನವ್ಯೋತ್ತರ ಕಾಲದಲ್ಲಿ ಸ್ವಂತಿಕೆಯನ್ನು ಮೆರೆದು ಕನ್ನಡ ಕಾವ್ಯ ಭಾಷ್ಯಗೆ ಸ್ವೋಪ್ರಜ್ಞತೆಯ ಮೆರಗನ್ನು ನೀಡಿದರು.

ಸುಮಾರು ಐದು ದಶಕಗಳಕ್ಕೂ ಹೆಚ್ಚು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದರೂ ಸಹ ನಿಸಾರ್ ಅಹಮದ್ ಅವರು ಕವಿಯಾಗಿಯೇ ಕನ್ನಡದಲ್ಲಿ ಖ್ಯಾತಿಯನ್ನು ಪಡೆದರು. ಕನ್ನಡ ಸುಗಮ ಸಂಗೀತದಲ್ಲಿ ನಿತ್ಯೋತ್ಸವ ಗೀತೆ ತುಂಬಾ ಯಶಸ್ಸನ್ನು ತಂದುಕೊಟ್ಟು ಮನರಂಜನಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿತು.

ಅದೇರೀತಿ ‘ ಕುರಿಗಳು ಸಾರ್ ಕುರಿಗಳು’ ಜನಮಾನಸದಲ್ಲಿ ಪ್ರಸಿದ್ಧಿ ಪಡೆಯಿತು. ” ಬೆಣ್ಣೆ ಕದ್ದ ನಮ್ಮ ಕೃಷ್ಣ ” ಎಂಬುದು ಯಶೋದಾ ತಾಯಿಯ ಅಕುಟಿಲವಾದ ನಗು ನಮ್ಮನ್ನು ಕಾಪಾಡಲಿ ಎಂಬ ಆಶಯವುಳ್ಳ ಈ ಹಾಡು ದೇಶ ವಿದೇಶಗಳಲ್ಲಿ ಆಸ್ತಿಕ ಬಂಧುಗಳ ಜನಪ್ರಿಯ ಕೀರ್ತನೆಯಾಗಿ ಹೊರಹೊಮ್ಮಿತು.

ಹಿಂದು, ಮುಸ್ಲಿಂ, ಕ್ರೈಸ್ತ ಸಂವೇದನೆಗಳು ಒಳಗೊಂಡ ಸಾಮರಸ್ಯದ ಅಭಿವ್ಯಕ್ತಿಯನ್ನು ನಿಸಾರ್ ಅಹಮದ್ ಅವರ ಕಾವ್ಯದುದ್ದಕ್ಕೂ ಹರಿದು ಬಂದಿದೆ. ಕಾವ್ಯ ಕ್ಷೇತ್ರಕ್ಕೆ ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದ ಅವರು ವೈವಿಧ್ಯಮಯ, ವಿಶಿಷ್ಟ ಕಾವ್ಯಗಳನ್ನು ಕನ್ನಡಕ್ಕೆ ನೀಡಿದ ಕನ್ನಡದ ವಿಶಿಷ್ಟ, ಮಹತ್ವದ ಕವಿಯಾಗಿದ್ದಾರೆ.

ಭೌತಿಕವಾಗಿ ಕವಿ ನಿಸಾರ್ ಅಹಮದ್ ಅವರು ಇಲ್ಲದಿದ್ದರೂ ನಿತ್ಯೋತ್ಸವದ ಮೂಲಕ ಇಂದು, ಮುಂದು, ಎಂದೆಂದಿಗೂ ಕನ್ನಡದ ಸಾರಸ್ವತ ಲೋಕದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ನಮ್ಮ ವಿನಯವಾಣಿ ಆ ಮಹಾನ್ ಕನ್ನಡದ ಸಾಹಿತ್ಯ ಚೇತನಕ್ಕೆ ಅಕ್ಷರ ನಮನ ಸಲ್ಲಿಸುತ್ತದೆ.

ಕಳೆದ ನಾಲ್ಕು ವರ್ಷದ ಹಿಂದೆ ಮೈಸೂರ ದಸರಾ ಉದ್ಘಾಟಕರಾಗಿ ಆಯ್ಕೆಯಾದಾಗ ವಿನಯವಾಣಿ ಸಂಪಾದಕರು ಕವಿ ನಿಸಾರಹ್ಮದ್ ರನ್ನು ಸಂಪರ್ಕಿಸಿ ಇಂಟ್ರ್ಯೂ ಮಾಡಿದ್ದರು. ಮೊಬೈಲ್ ನಲ್ಲೆ ಕೆಲವು ಪ್ರಶ್ನೆಗಳನ್ನು ಕೇಳಿ ಯಥಾವತ್ತಾಗಿ ಅವರ‌ ನುಡಿಗಳನ್ನು ವಿನಯವಾಣಿ ಯಲ್ಲಿ ಪ್ರಕಟಿಸಲಾಗಿತ್ತು.

ಸರಳ ಸಜ್ಜನಿಕೆಯ ಯುವ ಕವಿ‌ಮಿತ್ರರಿಗೆ ಮಾಧ್ಯಮದವರಿಗೆ ಉತ್ತಮ‌ ಮಾರ್ಗದರ್ಶಕರಾಗಿದ್ದರು.‌ ಜೋಗದ ಸಿರಿಗೆ ಅಲ್ಲಿನ ಹಸಿರು ಸೊಬಗು ಮೆರಗು ನೀಡಿದರೆ ನಿತ್ಯೋತ್ಸವ ಕವಿಗೆ ಅವರ ಸರಳ‌ ನಡೆ, ನುಡಿ ಸೌಮ್ಯ‌ತೆ ಮೆರಗು ಹೆಚ್ಚಿಸಿತ್ತು.

ಅವರೊಂದಿಗೆ ಮಾತನಾಡಿದ ವಿನಯವಾಣಿಗೆ ಅದೊಂದು ಅವಿಸ್ಮರಣೀಯ ದಿನವೆಂದು ಸ್ಮರಿಸುತ್ತದೆ. ಅವರ ಇಂಟ್ರ್ಯೂವಿಗೆ ಅನವು ಮಾಡಿ ಕೊಟ್ಟಿದ್ದ ಸದಾ ಅವರ ಜೊತೆಯಲಿ ಇರುತ್ತಿದ್ದ ಶಿಷ್ಯ ನಾಡಿನ ಖ್ಯಾತ ಛಾಯಾಗ್ರಾಹಕ ಚಿತ್ರದುರ್ಗದ ನಿಸರ್ಗ ಗೋವಿಂದರಾಜು ಸರ್ ಅವರಿಗೂ ಈ ಸಂದರ್ಭದಲ್ಲಿ‌ ನೆನಪಿಸಿಕೊಳ್ಳುತ್ತಾ..

ಗುರು‌ ಕವಿ ನಿಸಾರ್ಹ್ಮದರನ್ನು ಕಳೆದುಕೊಂಡ ಗೋವಿಂದರಾಜು ಸೇರಿದಂಥೆ ಕವಿಗಳ‌ ಕುಟುಂಬ ವರ್ಗಕ್ಕೂ ಅಪಾರ ಅಭಿಮಾನಿ ಬಳಗಕ್ಕೂ ದುಖಃ ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಮಲ್ಲಿಕಾರ್ಜುನ ಮುದನೂರ ಸಂಪಾದಕರು. ವಿನಯವಾಣಿ. ಹಾಗೂ ಲೇಖಕ ರಾಘವೇಂದ್ರ ಹಾರಣಗೇರಾ. ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.

Related Articles

Leave a Reply

Your email address will not be published. Required fields are marked *

Back to top button