ಪ್ರಮುಖ ಸುದ್ದಿ
ಧಾರವಾಡದ ಸರ್ಕ್ಯೂಟ್ ಹೌಸ್ ನಲ್ಲಿ ನಟಿ ಭಾವನಾ ಹೈಡ್ರಾಮಾ!
ಧಾರವಾಡ: ಬೆಳಗಾವಿಯ ಸಾಧನಾ ಸಮಾವೇಶದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಧಾರವಾಡಕ್ಕೆ ತೆರಳಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಸಿಎಂ ಸರ್ಕ್ಯೂಟ್ ಹೌಸ್ ನಲ್ಲಿ ವಿಶ್ರಾಂತಿಗೆ ತೆರಳಿದ್ದಾರೆ. ಇದೇ ವೇಳೆ ಸರ್ಕ್ಯೂಟ್ ಹಾಲ್ ಗೆ ಆಗಮಿಸಿದ ನಟಿ ಭಾವನಾ ಅವರನ್ನು ಸರ್ಕ್ಯೂಟ್ ಹಾಲ್ ಗೆ ತೆರಳಲು ಮುಂದಾಗಿದ್ದಾರೆ. ಆದರೆ, ಶಿಷ್ಟಾಚಾರ ಪಾಲನೆ ಹಿನ್ನೆಲೆಯಲ್ಲಿ ಪೊಲೀಸರು ನಟಿ ಭಾವನಾ ಅವರನ್ನು ತಡೆದಿದ್ದಾರೆ.
ಪೊಲೀಸರು ತಡೆದದ್ದಕ್ಕಾಗಿ ಗರಂ ಆದ ನಟಿ ಭಾವನಾ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ನಾನು ಮುಖ್ಯಮಂತ್ರಿಗಳು ಬರುವವರೆಗೂ ಇಲ್ಲೇ ಇರುತ್ತೇನೆ ಎಂದು ಹೇಳಿ ಹಠ ಹಿಡಿದಿದ್ದಾರೆ. ಪರಿಣಾಮ ಸರ್ಕ್ಯೂಟ್ ಹಾಲ್ ಬಳಿ ಕೆಲ ಕಾಲ ಹೈಡ್ರಾಮಾವೇ ನಡೆದಿದೆ. ಪೊಲೀಸ್ ಅಧಿಕಾರಿಗಳು, ಕೆಲ ನಾಯಕರು ನಟಿ ಭಾವನಾ ಮನವೊಲಿಸಲು ಹರಸಾಹಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.