ಪ್ರಮುಖ ಸುದ್ದಿ
ರಾಜಕೀಯ ಪ್ರವೇಶಿಸುವ ಮಠಾಧೀಶರ ಬಗ್ಗೆ ಈ ಸ್ವಾಮೀಜಿ ಹೇಳಿದ್ದೇನು ನೋಡಿ!
ಧಾರವಾಡ: ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರುವ ಯೋಗ ಆದಿತ್ಯನಾಥ್ ಅವರ ಪ್ರೇರಣೆಯಿಂದಾಗಿ ಕರ್ನಾಟಕದಲ್ಲೂ ಇಬ್ಬರು ಮೂವರು ಮಠಾಧೀಶರು ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಚುನಾವಣಾ ಅಖಾಡಕ್ಕೆ ಧುಮುಕಲು ಮುಂದಾಗಿದ್ದಾರೆ. ಅಂತ ಸ್ವಾಮಿಗಳನ್ನು ಭಕ್ತರೇ ಆಯಾ ಮಠಗಳಿಂದ ಅವರನ್ನು ಹೊರ ಹಾಕಬೇಕು ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.
ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗನೂರು ಸ್ವಾಮೀಜಿ ರಾಜಕೀಯ ಪ್ರವೇಶ ಬಯಸಿರುವ ಸ್ವಾಮೀಜಿಗಳ ವಿರುದ್ಧ ಕಿಡಿಕಾರಿದ್ದಾರೆ. ಮಠ-ಮಾನ್ಯಗಳಿಗೆ ರಾಜಕಾರಣ ಬಯಸುವ ಸ್ವಾಮಿಗಳ ಅಗತ್ಯವಿಲ್ಲ. ಮಠಾಧೀಶರು ಮಠದ ಕೆಲಸ ಬಿಟ್ಟು ರಾಜಕೀಯ ಕ್ಷೇತ್ರ ಪ್ರವೇಶಿಸಿ ಅಲ್ಲಿ ಕೆಲಸ ಮಾಡುವ ಅಗ್ಯವಿಲ್ಲ. ಕಾವಿದಾರಿಗಳು ರಾಜಕಾರಣಿ ಆಗುತ್ತೇವೆ ಎಂಬುದು ಹುಚ್ಚರ ಸಂತೆ ಎಂಬಂತಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.