ಪ್ರಮುಖ ಸುದ್ದಿ
ಸಿಎಂ ಆಪ್ತ ಕಾರ್ಯದರ್ಶಿಯಾಗಿ ಹೊರಡಿಸಿದ್ದ ಆದೇಶಕ್ಕೆ ತಡೆ..ಯಾಕೆ ಗೊತ್ತಾ.?
ಸಿಎಂ ಆಪ್ತ ಕಾರ್ಯದರ್ಶಿಯಾಗಿ ಹೊರಡಿಸಿದ್ದ ಆದೇಶಕ್ಕೆ ತಡೆ ಯಾಕೆ ಗೊತ್ತಾ.?
ಬೆಂಗಳೂರಃ ಸಿಎಂ ಯಡಿಯೂರಪ್ಪ ನವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಕ್ಕೆ ಕೊನೆ ಹಂತದಲ್ಲಿ ಯಡಿಯೂರಪ್ಪನವರೇ ಅದನ್ನು ತಡೆ ಹಿಡಿಯುವಂತೆ ಸೂಚಿಸಿದ್ದಾರೆ.
ಸದ್ಯದ ರಾಜಕೀಯ ಬೆಳವಣಿಗೆ ಡೋಲಾಯಮಾನ ಸ್ಥಿತಿ ಕಂಡು ಬಂದಿರುವುದೇ ಇದಕ್ಕೆ ಮುಖ್ಯ ಕಾರಣವೆಂಬುದು ಮೇಲ್ನೋಟಕ್ಕೆ ಕಂಡು ಬಂದರೂ, ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎನ್.ಆರ್.ಸಂತೋಷ ನೇಮಕ ಸರಿಯಲ್ಲ ಎಂದು ಸಿಎಂ ಆಪ್ತರು ಸಲಹೆ ನೀಡಿದ್ದಾರಂತೆ.
ಹೀಗಾಗಿ ಪ್ರಸ್ತುತ ಸಂತೋಷ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ಹುದ್ದೆ ಜವಬ್ದಾರಿ ನೀಡುವದು ಬೇಡವೆಂಬ ನಿರ್ಧಾರಕ್ಕೆ ಸಿಎಂ ಬಂದಿದ್ದಾರೆ ಎನ್ನಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಚಿಂತನೆಯಲ್ಲಿ ಸಂತೋಷ ಇದ್ದಾರೆ ಎನ್ನಲಾಗಿದೆ.