ಪ್ರಮುಖ ಸುದ್ದಿ
ಮತ್ತೆ ಕೊಳ್ಳೂರ ಸೇತುವೆ ಮುಳುಗಡೆ ರಸ್ತೆ ಸಂಚಾರ ಸ್ಥಗಿತ
ಯಾದಗಿರಿಃ ಜಿಲ್ಲೆಯ ಶಹಾಫುರ ತಾಲೂಕಿನ ಕೊಳ್ಳೂರ (ಎಂ) ಸೇತುವೆ ನೆರೆ ಹಾವಳಿಯಿಂದ ಸಂಪೂರ್ಣ ಮುಳುಗಡೆಯಾಗಿದ್ದು, ಕಲಬುರ್ಗಿ ಮತ್ತು ರಾಯಚೂರ ಜಿಲ್ಲೆ ಸಂಚಾರಕ್ಕೆ ಅಡಚಣೆಯಾಗಿದೆ. ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವದರಿಂದ ಬಸವಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಮತ್ತೇ ನೀರು ಹರಿದು ಬಂದಿರುವ ಕಾರಣ, 3.7 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಹೀಗಾಗಿ ಶಹಾಪುರ ತಾಲೂಕಿನ ಹಲವಾರು ಗ್ರಾಮಗಳಿಗೆ ಮತ್ತೇ ನೆರೆ ಹಾವಳಿ ಆತಂಕ ಹೆಚ್ಚಾಗಿದೆ.