BREAKING NEWS- ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ, ಡಿ.28 ರಿಂದ 10 ದಿನ
BREAKING NEWS- ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ, ಡಿ.28 ರಿಂದ 10 ದಿನ
ಬೆಂಗಳೂರಃ ಓಮಿಕ್ರಾನ್ ತೀವ್ರತೆ ಹೆಚ್ಚಳ ಹಿನ್ನೆಲೆ ರಾಜ್ಯಾದ್ಯಾಂತ ಡಿ.28 ರಿಂದ 10 ದಿನ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆವಹಿಸಬೇಕು ಎಂದು ಆರೋಗ್ಯ ಸಚಿಚ ಡಾ.ಕೆ.ಸುಧಾಕರ ತಿಳಿಸಿದರು.
ಓಮಿಕ್ರಾನ್ ಹೆಚ್ಚಳ ಹಿನ್ನೆಲೆ ಕಟ್ಟು ನಿಟ್ಟಿನ ಮಾರ್ಗಸೂಚಿ ಜಾರಿಗಾಗಿ ಸಿಎಂ ಕರೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಸಭೆ ಸಮಾರಂಭಗಳಿಗೆ 50% ರಷ್ಟು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ವರ್ಷ ಆಚರಣೆಗೂ ಬ್ರೇಕ್ ಹಾಕಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆ ಮಾಡುವಂತಿಲ್ಲ ಎಂದು ಮಾಹಿತಿ ನೀಡಿದರು.
ಅಲ್ಲದೆ ಕೋವಿಡ್ ಗೆ ಸಂಬಂಧಪಟ್ಟಂತೆ ಈಗಾಗಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. 4 ಸಾವಿರ ಐಸಿಯು ಬೆಡ್ ಸಿದ್ಧತೆ ಮಾಡಲಾಗಿದೆ. ಪ್ರಧಾನಿ ಅವರು ಹೇಳಿದಂಯೆಜ.10 ರಿಂದ ಕೊರೊನಾ ವಾರಿಯರ್ಸ್ಗಳಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಬ್, ಬಾರ್,ರೆಸ್ಟೋರೆಂಟ್ ಗಳಲ್ಲಿ ಶೇ.50 ರಷ್ಟು ಅವಕಾಶ
ಹಗಲಿನಲ್ಲಿ ಶೇ.50 ರಷ್ಟು ಅವಕಾಶ ನೀಡಲಾಗಿದೆ. ರಾತ್ರಿ10 ಗಂಟೆಗೆ ಕಂಪ್ಲೀಟ್ ಬಂದ್. ರಾತ್ರಿ ಪಾರ್ಟಿ ಬಂದ್ ಮಾಡಲಾಗಿದೆ. ರಸ್ತೆಗಳಲ್ಲಿ ಡಿಜೆ ಮ್ಯೂಸಿಕ್, ಪಾರ್ಟಿಗೆ ಅವಕಾಶವಿಲ್ಲ. ಮನೆಯಲ್ಲೆ ಹೊಸ ವರ್ಷ ಆಚರಣೆ ಮಾಡ್ಕೊ ಬೇಕು.
-ಡಾ.ಸುಧಾಕರ. ಆರೋಗ್ಯ ಅಚಿವರು.