ಪ್ರಮುಖ ಸುದ್ದಿ
ಪೈಲ್ಸ್ ರೋಗಕ್ಕೆ ಮನನೊಂದು ಯುವಕ ಆತ್ಮಹತ್ಯೆ..?
ಖಾಯಿಲೆಗೆ ಮನನೊಂದ ಯುವಕ ಆತ್ಮಹತ್ಯೆ
ಶಹಾಪುರಃ ಅನಾರೋಗ್ಯದ ತೀವ್ರತೆಯಿಂದ ನರಳುತ್ತಿದ್ದ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಹಲ್ ರೋಜಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಶಿವರಾಜ ತಂದೆ ರಾಮಣ್ಣ (20) ನೇಣಿಗೆ ಶರಣಾದ ದುರ್ದೈವಿ. ಗಾಮದ ಹೊರವಲಯದ ಬೆಟ್ಟದ ಹಿಂಭಾಗದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನಿಗೆ ಮೂಲವ್ಯಾದಿ ಇದ್ದು ಗುಣಮುಖ ಕಾಣದೆ ಚಿಂತಿತನಾಗಿದ್ದ, ಅದರ ತೀವ್ರತೆಗೆ ಆತಂಕಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಪೊಲೀಸರ ತನಿಖೆಯಿಂದಲೇ ಸತ್ಯಾಸತ್ಯತೆ ಹೊರಬೀಳಲಿದೆ.