ಪ್ರಮುಖ ಸುದ್ದಿ
ಪಾಕಿಸ್ತಾನ ಕೊರೆದ ಸುರಂಗ ರಹಸ್ಯ ಮಾರ್ಗ ಪತ್ತೆ, ಜಮ್ಮು- ಕಾಶ್ಮೀರಕ್ಕೆ ಭಯೋತ್ಪಾದಕರ ರವಾನೆಗೆ ಬಳಕೆ
ಪಾಕಿಸ್ತಾನ ಕೊರೆದ ಸುರಂಗ ಮಾರ್ಗ ಪತ್ತೆ, ಈ ಸುರಂಗ ಮೂಲಕ ಜಮ್ಮು-ಕಾಶ್ಮೀರಕ್ಕೆ ಭಯೋತ್ಪಾದಕರ ರವಾನೆ.!
ಶ್ರೀನಗರಃ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಪಾಕಿಸ್ತಾನ ನಡೆಸಿದ ಮತ್ತೊಂದು ಕುತಂತ್ರ ಬಯಲಾಗಿದೆ.
ಭಾರತ ಮತ್ತು ಪಾಕಿಸ್ತಾನ ಗಡಿಯ ಸಾಂಬಾ ಪ್ರದೇಶದಲ್ಲಿ ಪಾಕಿಸ್ತಾನ ರಹಸ್ಯವಾಗಿ ಕೊರೆದಿರುವ ಸುರಂಗ ಮಾರ್ಗ ಪತ್ತೆ ಮಾಡಲಾಗಿದೆ.
ಇದೇ ಸುರಂಗ ಮೂಲಕ ಪಾಕಿಸ್ತಾನ ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸುತಿತ್ತು ಎನ್ನಲಾಗಿದೆ. ಗುಪ್ತಚರರು ನೀಡಿದ ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸಲಾಗಿ ಈ ರಹಸ್ಯ ಸುರಂಗ ಮಾರ್ಗ ಪತ್ತೆಯಾಗಿದೆ ಎಂದು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನ ಐಜಿ ಎನ್.ಎಸ್.ಜಮವಾಲ್ ತಿಳಿಸಿದ್ದಾರೆ.
ಈ ಕುರಿತು ಪಾಕಿಸ್ತಾನದಿಂದ ವಿವರಣೆ ಕೇಳಿ ಪತ್ರ ಬರೆಯಲು ಈಗ ಬಿಎಸ್ಎಫ್ ತಯಾರಿ ನಡೆಸಿದೆ ಎನ್ನಲಾಗಿದೆ. ಪ್ರಸ್ತುತ ಸುರಂಗ ಪತ್ತೆಯಾದ ಸ್ಥಳದಲ್ಲಿ ಭದ್ರತಾ ತುಕುಡಿ ನಿಯೋಜನೆ ಮಾಡಲಾಗಿದೆ.