ಪಂಪಸರೋವರಃ ಶ್ರೀರಾಮುಲು, ಜನಾರ್ಧನರಡ್ಡಿ ಬಳಕೆ ಮಾಡ್ತಿದ್ದ ಗೆಸ್ಟ್ ಹೌಸ್ ಗೆ ಬೆಂಕಿ
ಪಂಪಸರೋವರದಲ್ಲಿ ಬೆಂಕಿ ಅವಘಡ- ಗೆಸ್ಟ್ ಹೌಸ್ ಭಸ್ಮ
ಪಂಪಸರೋವರಃ ಶ್ರೀರಾಮುಲು, ಜನಾರ್ಧನರಡ್ಡಿ ಬಳಕೆ ಮಾಡ್ತಿದ್ದ ಗೆಸ್ಟ್ ಹೌಸ್ ಗೆ ಬೆಂಕಿ
ಗಂಗಾವತಿಃ ತಾಲೂಕಿನ ಇತಿಹಾಸ ಸುಪ್ರಸಿದ್ಧ ಪಂಪ ಸರೋವರದಲ್ಲಿರುವ ಅತಿಥಿಗಳ ಗೆಸ್ಟ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಗೆಸ್ಟ್ ಹೌಸ್ ಸುಟ್ಟು ಭಸ್ಮವಾದ ಘಟನೆ ಜರುಗಿದೆ.
ಬೆಳಗಿನ ಜಾವ ಪಂಪಾಸರೋವರ ವೀಕ್ಷಣೆಗೆ ಆಗಮಿಸಿದ್ದ ಉತ್ತರ ಭಾರತದ
ಪ್ರವಾಸಿಗರ ಬಸ್ ಒಂದು ಇಲ್ಲಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೆಸ್ಟ್ ಹೌಸ್ ಮೇಲೆ ವಿದ್ಯುತ್ ತಂತಿಗಳು ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಶ್ರೀರಾಮುಲು ನಿರ್ಮಿಸಿಕೊಂಡಿದ್ದ ಗೆಸ್ಟ್ ಹೌಸ್
ಪಂಪ ಸರೋವರದಲ್ಲಿ ಜೀರ್ಣೋದ್ಧಾರ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಈ ಗೆಸ್ಟ್ ಹೌಸ್ ನಿರ್ಮಿಸಿಕೊಂಡಿದ್ದರು. ಆಗಾಗ ಅವರು ಈ ಗೆಸ್ಟ್ ಹೌಸ್‌ನಲ್ಲಿ ಉಳಿಯುತ್ತಿದ್ದರು. ನಂತರ ಶಾಸಕ ಗಾಲಿ ಜನಾರ್ದನರೆಡ್ಡಿ ಇದನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.
ಅಲ್ಲದೆ ಪಂಪ ಸರೋವರಕ್ಕೆ ಆಗಮಿಸುತ್ತಿದ್ದ ಅತಿಥಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇಲ್ಲಿಯೃ ಉಳಿದುಕೊಳ್ಳುತ್ತಿದ್ದರು.
ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯವರು ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ಗೆಸ್ಟ್ ಹೌಸ್ ಒಳಗಡೆ ಯಾವ್ಯಾವ ಸಾಮಾಗ್ರಿಗಳು ಇದ್ದವೋ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿರುವದಿಲ್ಲ.