Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿ

ರುಚಿಕರವಾದ ಡಾಬಾ ಸ್ಟೈಲ್ ಪನ್ನೀರ್ ಬುರ್ಜಿ ಗ್ರೇವಿ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು…

  • ಪನ್ನೀರ್ – 300 ಗ್ರಾಂ
  • ಈರುಳ್ಳಿ – 1
  • ಟೊಮೆಟೋ – 2
  • ಕಡಲೇಹಿಟ್ಟು – 2 ಚಮಚ
  • ಅರಿಶಿಣಪುಡಿ- ಅರ್ಧ ಚಮಚ
  • ಬ್ಲಾಕ್ ಸಾಲ್ಟ್ – ಅರ್ಧ ಚಮಚ
  • ಕಸೂರಿ ಮೇಥಿ – 1 ಚಮಚ
  • ದನಿಯಾಪುಡಿ – 1 ಚಮಚ
  • ಅಚ್ಚಖಾರದಪುಡಿ – 1 ಚಮಚ
  • ಗರಂಮಸಾಲ – 1 ಚಮಚ
  • ಮೊಸರು – ಮುಕ್ಕಾಲು ಬಟ್ಟಲು
  • ಹಾಲು – ಕಾಲು ಬಟ್ಟಲು
  • ತುಪ್ಪ – 4 ಚಮಚ
  • ಬೆಣ್ಣೆ – 2 ಚಮಚ
  • ಕಾಶ್ಮೀರಿ ಚಿಲ್ಲಿ ಪೌಡರ್ – 1 ಚಮಚ
  • ಜೀರಿಗೆ – ಅರ್ಧ ಚಮಚ
  • ಹಸಿಮೆಣಸಿನಕಾಯಿ – 3
  • ಶುಂಠಿ – ಸ್ವಲ್ಪ
  • ಕೊತ್ತಂಬರಿಸೊಪ್ಪು – ಸ್ವಲ್ಪ
  • ನಿಂಬೆರಸ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

  • ಮೊದಲಿಗೆ ಒಲೆಯ ಮೇಲೆ ಪ್ಯಾನ್ ಇಟ್ಟು ಇದಕ್ಕೆ 2 ಚಮಚ ಕಡಲೇಹಿಟ್ಟನ್ನು ಹಾಕಿ ಲೋ ಫ್ಲೇಮ್ ನಲ್ಲಿ ಸುವಾಸನೆ ಬರುವವರೆಗೂ ಹುರಿದುಕೊಳ್ಳಿ. ಕಡಲೇಹಿಟ್ಟು ಸ್ವಲ್ಪ ಬಣ್ಣ ಬದಲಾಗುತ್ತಿದ್ದಂತೆ ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ.
  • ಹುರಿದ ಕಡಲೇಹಿಟ್ಟಿಗೆ ಅರಿಶಿಣಪುಡಿ, ಬ್ಲಾಕ್ ಸಾಲ್ಟ್, ಕಸೂರಿ ಮೇಥಿಯನ್ನು ಹಾಕಿ ಪೌಡರ್ ರೀತಿ ಮಾಡಿ ಹಾಕಿಕೊಳ್ಳಬೇಕು. ಹಾಗೇ ಇದಕ್ಕೆ ದನಿಯಾಪುಡಿ, ಅಚ್ಚಖಾರದಪುಡಿ, ಗರಂಮಸಾಲ, ಮೊಸರು, ಕಾಲು ಕಪ್ ಹಾಲು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ಇದೀಗ ಒಲೆಯ ಮೇಲೆ ಪ್ಯಾನ್ ಇಟ್ಟು ಇದಕ್ಕೆ 2 ಚಮಚ ತುಪ್ಪ ಹಾಕಿ. ತುಪ್ಪ ಕರಗಿದ ನಂತರ, 1 ಚಮಚ ಕಾಶ್ಮೀರಿ ಚಿಲ್ಲಿ ಪೌಡರ್ ಅನ್ನು ಹಾಕಿ ಸುಮ್ಮನೆ ಬೆಚ್ಚಗೆ ಮಾಡಿ ಸ್ಟೌವ್ ಆಫ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮಸಾಲೆ ಮಿಶ್ರಣದ ಜೊತೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು.
  • ಒಲೆಯ ಮೇಲೆ ಮತ್ತೊಂದು ಪ್ಯಾನ್ ಇಟ್ಟು ಇದಕ್ಕೆ 2 ಚಮಚ ತುಪ್ಪ, 2 ಚಮಚ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಜೀರಿಗೆ, ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಸ್ವಲ್ಪ ಹಾಕಿ ಗೋಲ್ಡನ್ ಕಲರ್ ಬರುವವರೆಗೂ ಫ್ರೈ ಮಾಡಿಕೊಳ್ಳಬೇಕು. ನಂತರ 2 ಸಣ್ಣದಾಗಿ ಹಚ್ಚಿರುವ ಟೊಮೆಟೋ ಹಾಕಿ ಫ್ರೈ ಮಾಡಬೇಕು.
  • ಟೊಮೆಟೋ ಮೆತ್ತೆಗೆ ಆದ ಮೇಲೆ ಮಸಾಲೆ ಮಿಶ್ರಣವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿ ಬೇಯಿಸಬೇಕು. 3 ನಿಮಿಷದ ಬಳಿಕ ಕಾಲು ಕಪ್ ಬಿಸಿನೀರನ್ನು ಹಾಕಿ ಕುದಿಸಿಕೊಳ್ಳಬೇಕು. (ಬೇಕಿನಿಸಿದರೆ ಹಸಿ ಬಟಾಣಿಯನ್ನ ಸೇರಿಸಿಕೊಳ್ಳಬಹುದು)
  • ಮಸಾಲೆ ಕುದಿ ಬರುವಾಗ ಪನ್ನೀರ್ ತುರಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಬಿಸಿನೀರನ್ನು ಹಾಕಿ ಕುದಿಸಿಕೊಂಡು ಕೊನೆಯಲ್ಲಿ ನಿಂಬೆರಸ ಹಾಕಿದರೆ ಸ್ಪೆಷಲ್ ಪಂಜಾಬಿ ಸ್ಟೈಲ್ ಪನ್ನೀರ್ ಬುರ್ಜಿ ಗ್ರೇವಿ ಸವಿಯಲು ಸಿದ್ಧ.

Related Articles

Leave a Reply

Your email address will not be published. Required fields are marked *

Back to top button