ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ – DC ಆದೇಶ
ಯಾದಗಿರಿಃ ರವಿವಾರ ಪೂರ್ಣ ದಿನ ಲಾಕ್ ಡೌನ್
ಯಾದಗಿರಿಃ ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಮತ್ತು ಅದರಿಂದುಂಟಾಗುವ ಅನಾಹುತಗಳನ್ನು ತಡೆಯಲು ಸಾರ್ವಜನಿಕ ಹಿತ ಹಾಗೂ ಆರೋಗ್ಯ ದೃಷ್ಟಿಯಿಂದ ಈ ಮೊದಲು ಮೇ 31 ರ ಮಧ್ಯರಾತ್ರಿಯಿಂದ ಜೂನ್ 30 ರ ಮಧ್ಯ ರಾತ್ರಿಯವರೆಗೆ ಹೊರಡಿಸಿದ್ದ ನಿಷೇಧಾಜ್ಞೆಯಲ್ಲಿ ಸರ್ಕಾರದ ಆದೇಶದಂತೆ ಸೇರ್ಪಡೆ ಮತ್ತು ಕೆಲ ತಿದ್ದುಪಡಿಗಳನ್ನು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಆದೇಶ ಹೊರಡಿಸಿದ್ದಾರೆ.
ಜುಲೈ 5 ರವಿವಾರದಿಂದ ಮುಂದಿನ ನಾಲ್ಕು ರವಿವಾರಗಳಂದು ಪೂರ್ಣ ದಿನದ ಲಾಕ್ ಡೌನ್ ಮಾಡಲಾಗುತ್ತಿದ್ದು, ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವದಿಲ್ಲ.
ಜಿಲ್ಲೆಯ ಎಲ್ಲಾ ರಾಜ್ಯ ಸರ್ಕಾರದ ಇಲಾಖೆಗಳು, ಕಚೇರಿಗಳು ಬೋರ್ಡ್ಗಳು ಮತ್ತು ಕಾರ್ಪೋರೇಷನ್ ಗಳು (ತುರ್ತು, ಅಗತ್ಯ ಹೊರತುಪಡಿಸಿ.) ಈಗಿರುವ ಎರಡನೇ ಶನಿವಾರ ಮತ್ತು ನಾಲ್ಕನೇಯ ಶನಿವಾರಗಳನ್ನು ಸೇರಿಸಿಕೊಂಡಂತೆ 2020ರ ಜುಲೈ 10 ರಿಂದ ಎಲ್ಲಾ ಶನಿವಾರಗಳಂದು ಆಗಸ್ಟ್ 8 ರವರೆಗೆ ಮುಚ್ಚಲ್ಪಡುತ್ತವೆ ಅಂದ್ರೆ ಆ ದಿನಗಳ್ಳಿ ಕಾರ್ಯನಿರ್ವಹಿಸುವದಿಲ್ಲ ಬಂದ್ ಮಾಡಲ್ಪಡುತ್ತದೆ.
ರಾತ್ರಿ 8 ರಿಂದ ಬೆಳಗ್ಗೆ 5 ಕರ್ಫ್ಯೂ ಜಾರಿ
ಜಿಲ್ಲೆಯಾದ್ಯಂತ ರಾತ್ರಿ ರಾತ್ರಿ 8 ರಿಂದ ಬೆಳಗ್ಗೆ 5 ಕರ್ಫ್ಯೂ ಜಾರಿಯಲ್ಲಿರುತ್ತದೆ. ಕರ್ಫ್ಯೂ ಅವಧಿಯಲ್ಲಿ ಅತ್ಯಗತ್ಯವಾದ ಚಟುವಟಿಕೆ ಹೊರತು ಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.