ಪ್ರಮುಖ ಸುದ್ದಿ
ಕ್ಯಾ ಭಾಯಿ ಅಗಲೇ ಬಾರ್ ಜೆಡಿಎಸ್ ಕೋ ಮತ್ ಡಾಲೋಗೇ? -ಡಾ.ಜಿ.ಪರಮೇಶ್ವರ್ ಡೈಲಾಗ್
ತುಮಕೂರು: ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಹೋಗಲು ಪ್ಲಾನ್ ಮಾಡಿದ್ದಾರೆ. ಹೀಗಾಗಿ, ಜಾತ್ಯಾತೀತತೆ ಅಂದರೆ ಏನು ಅಂತ ಗೊತ್ತಿಲ್ಲ ಅಂತ ಕುಮಾರಸ್ವಾಮಿ ಅವರೇ ಹೇಳುತ್ತಾರೆ. ಆದರೆ, ಈ ಸಾಬ್ರು ನೋಡಿದರೆ ಆಗಾಗ ಜೆಡಿಎಸ್ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಹೇಳಿದ ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಬಳಿಕ ಕ್ಯಾ ಭಾಯಿ ಅಗಲೇ ಬಾರ್ ಜೆಡಿಎಸ್ ಕೋ ಮತ್ ಡಾಲೋಗೇ ಕ್ಯಾ ಎಂದು ಮುಸ್ಲಿಂ ಸಮುದಾಯದವರನ್ನು ಪ್ರಶ್ನಿಸುವ ಮೂಲಕ ಜೆಡಿಎಸ್ ಗೆ ಮತ ಹಾಕದಂತೆ ಮನವಿ ಮಾಡಿದರು.
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿದ ಬಳಿಕ ಡಾ.ಜಿ.ಪರಮೇಶ್ವರ್ ಮಾತನಾಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯೇ ಅನ್ನಭಾಗ್ಯದಂತ ಕಾರ್ಯಕ್ರಮ ಜಾರಿಗೊಳಿಸಿದರು. ಆದರೆ, ಜೆಡಿಎಸ್ ನವರು ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆ ನಿಲ್ಲಿಸ್ತಾರಂತೆ. ಅಂಥ ಪಕ್ಷದವರನ್ನು ಪಾವಗಡಕ್ಕೆ ಬಿಟ್ಟುಕೊಳ್ಳಬೇಡಿ ಎಂದರು.