ಖಾಸಗಿ ಶಾಲೆಯಿಂದ ವಿದ್ಯಾಗಮ ಯೋಜನೆ ಅಧಿಕಾರಿಗಳಿಂದ ಮೆಚ್ಚುಗೆ
ವಿದ್ಯಾಗಮದಲ್ಲಿ ಸರ್ವ ಶಾಲೆಯ ಮಕ್ಕಳಿಗೆ ಅವಕಾಶ
yadgiri, ಶಹಾಪುರಃ ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಬಾರದು ಎಂದು ವಿದ್ಯಾಗಮ ನಿರಂತರ ಕಲಿಕೆ ಚಟುವಟಿಕೆ ಪ್ರಾರಂಭವಾಗಿದ್ದು, ಹಳಪೇಟೆಯಲ್ಲಿ ಸದ್ದುಗದ್ದಲವಿಲ್ಲದೆ ಜ್ಞಾನಗಂಗೋತ್ರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ತಮ್ಮ ಶಾಲೆಯ ಮಕ್ಕಳನ್ನು ಮತ್ತು ನೆರೆಹೊರೆಯ ಕಲಿಕೆಯ ಆಸಕ್ತಿಯಿರುವ ಎಲ್ಲಾ ಮಕ್ಕಳಿಗೆ ಪ್ರತ್ಯೇಕ ಆರು ಕಡೆಯಲ್ಲಿ ಕೇಂದ್ರ ಪ್ರಾರಂಭಿಸಿರುವುದು ಶಿಕ್ಷಣದ ಕಾಳಜಿಗೆ ಇದೊಂದು ಉತ್ತಮ ಬೆಳವಣಿಗೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಪಾಟೀಲ ತಿಳಿಸಿದರು.
ನಗರದ ಹಳೆಪೇಟೆ ಬಡಾವಣೆಯ ಜ್ಞಾನಗಂಗೋತ್ರಿ ಶಾಲೆವತಿಯಿಂದ ನಡೆದಿರುವ ವಿದ್ಯಾಗಮ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡ ಅವರು, ಆರೋಗ್ಯದ ಬಗ್ಗೆ ಗಮನವಿರಲಿ, ಸರಕಾರದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ವಿದ್ಯಾಗಮ ಯೋಜನೆಯ ಲಾಭ ಪಡೆಯಿರಿ. ಪ್ರತಿಯೊಬ್ಬರು ಕಲಿಕೆಯಲ್ಲಿ ಮುಂಚೂಣಿಗೆ ಬರಬೇಕೆಂಬುದು ಇದರ ಉದ್ದೇಶವಾಗಿದ್ದು ಸ್ಥಳೀಯ ಬಡಾವಣೆಯಲ್ಲಿ ಕಲಿಕೆಗೆ ಉತ್ತಮ ವಾತಾವರಣವಿದೆ ಎಂದು ತಿಳಿಸಿದರು.
ಬಿಆರ್‍ಪಿ ರಾಜಶೇಖರ ಪತ್ತಾರ ವಿದ್ಯಾರ್ಥಿಗಳು ಸಜ್ಜುಗೊಳಿಸಿದ ಯೋಜನೆಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿದರು. 6 ಕೇಂದ್ರಗಳಲ್ಲಿ ವಿದ್ಯಾಗಮನ ನಡೆದಿದ್ದು, ಇದರಲ್ಲಿ ಮೂರು ಕೇಂದ್ರಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಕಲಿಕಾಸ್ಥಿತಿ ಉತ್ತಮವಾಗಿರುವುದು ಕಂಡು ಸಂತಸ ವ್ಯಕ್ತಪಡಿಸಿದರು. ಕಂಪ್ಯೂಟರ್ ಪೆÇ್ರೀಗ್ರಾಮರ್ ಶೀಲವಂತ ಚಿಂಚೋಳಿ ಮತ್ತು ಶಾಲೆಯ ಶಿಕ್ಷಕರು ಇದ್ದರು.