ಪ್ರಮುಖ ಸುದ್ದಿ
ನಟ ಪವನ್ ಕಲ್ಯಾಣ ನೋಡಲು ಅಭಿಮಾನಿಗಳ ನೂಕು ನುಗ್ಗಲು, ಲಘು ಲಾಠಿ ಪ್ರಹಾರ!
ಚಿಕ್ಕಬಳ್ಳಾಪುರ: ನಗರದ ಸಿವಿವಿ ಕ್ಯಾಂಪಸ್ ಗೆ ಇಂದು ಆಂಧ್ರ ಪ್ರದೇಶದ ಪ್ರಖ್ಯಾತ ನಟ, ಜನಸೇವಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ ಭೇಟಿ ನೀಡಿದ್ದಾರೆ. ರಾಜಕೀಯ ನಾಯಕ ಕೆ.ವಿ.ಕಿರಣ್ ಅವರ ಭೇಟಿಗೆ ಆಗಮಿಸಿದ್ದ ಪವನ್ ಕಲ್ಯಾಣ್ ಗೆ ಅಭಿಮಾಣಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ.
ತೆರೆದ ಕಾರಿನಲ್ಲಿ ಅಭಿಮಾನಿಗಳತ್ತ ಕೈಬೀಸುತ್ತ, ನಮಿಸುತ್ತ ವೇದಿಕೆಗೆ ಆಗಮಿಸಿದ ಪವನ್ ಕಲ್ಯಾಣ ಅವರನ್ನುತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿಟ್ಟುಕೊಳ್ಳಲು ಅಭಿಮಾನಿಗಳು ತಾಮುಂದು ನಾಮುಂದು ಅಂತ ಮುಗಿಬಿದ್ದಿದ್ದಾರೆ. ಕೆಲವರು ಸೆಲ್ಫಿ ತೆಗೆದುಕೊಳ್ಳಲು ಹಂಬಲಿಸಿದ್ದಾರೆ. ಹೀಗಾಗಿ, ತೀವ್ರ ನೂಕು ನುಗ್ಗಲು ಆಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದು ಕೆಲವರಿಗೆ ಲಾಠಿ ರುಚಿಯನ್ನು ತೋರಿಸಿದ್ದಾರೆ.