ಪೇಜಾವರಶ್ರೀ ತೆರಳುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ! ಆಗಿದ್ದೇನು?
ಬಳ್ಳಾರಿ: ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಸರ್ವಧರ್ಮ ರಥೋತ್ಸವಕ್ಕೆ ಆಗಮಿಸಿದ್ದ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ಹೆಲಿಕಾಪ್ಟರ್ ಮೂಲಕ ಹಿಂದಿರುಗುವ ವೇಳೆ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಹಡಗಲಿ ತಾಲ್ಲೂಕಿನ ಹೊಳಲು ಗ್ರಾಮದ ಬಳಿ ಹೆಲಿಕಾಪ್ಟರ್ ನೆಲಕ್ಕಪ್ಪಳಿಸಿದೆ.
ಹೆಲಿಕಾಪ್ಟರ್ ಪೈಲಟ್ ಸಮಯಪ್ರಗ್ನೆಯಿಂದಾಗಿ ಹೊಳಲು ಗ್ರಾಮದ ಬಳಿಯ ಸಾಧನಾ ಶಾಲಾ ಮೈದಾನದಲ್ಲಿ ಲ್ಯಾಂಡ್ ಆಗಿದೆ. ಹೀಗಾಗಿ, ಏಕಾಏಕಿ ಹೆಲಿಕಾಪ್ಟರ್ ಬಂದಿಳಿದ ಕಾರಣ ಗ್ರಾಮೀಣ ಜನರೆಲ್ಲಾ ಮೈದಾನದತ್ತ ಧಾವಿಸಿದ್ದಾರೆ. ಪೇಜಾವರಶ್ರೀಗಳು ಹೆಲಿಕಾಪ್ಟರ್ ನಲ್ಲಿ ಇರುವುದನ್ನು ಕಂಡು ಕ್ಷೇಮ ವಿಚಾರಿಸಿದ್ದಾರೆ.
ಕೆಲಹೊತ್ತು ಹೆಲಿಕಾಫ್ಟರ್ ಸಾಧನಾ ಶಾಲಾ ಮೈದಾನದಲ್ಲೇ ಉಳಿದಿದ್ದು ಹೆಲಿಕಾಪ್ಟರ್ ಪೈಲಟ್ ಫೋನ್ ಮೂಲಕ ತಗ್ನರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಹೆಲಿಕಾಪ್ಟರ್ ತಾಂತ್ರಿಕ ದೋಷವನ್ನು ಸರಿಪಡಿಸಿಕೊಂಡು ಮತ್ತೆ ಅಲ್ಲಿಂದ ತೆರಳಿದ್ದಾರೆ. ಹೆಲಿಕಾಪ್ಟರ್ ಸುರಕ್ಷಿತವಾಗಿ ಮತ್ತೆ ಮರಳಿ ಉಡುಪಿಯತ್ತ ತೆರಳಿದೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಗ್ರಾಮಸ್ಥರು ಕೆಲವರು ಪೇಜಾವರಶ್ರೀಗಳ ಕ್ಷೇಮ ವಿಚಾರಿಸಿ ಎಲ್ಲಿಗೆ ಹೋಗಿದ್ದಿರಿ ಬುದ್ಧಿ ಎಂದು ವಿಚಾರಿಸಿದ್ದಾರೆ. ಹೊಸಪೇಟೆಗೆ ಹೋಗಿದ್ದೇವು. ಸರ್ವಧರ್ಮ ರಥೋತ್ಸವದಲ್ಲಿ ಪಾಲ್ಗೊಂಡು ಹಿಂದಿರುಗುವ ವೇಳೆ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಭೂಸ್ಪರ್ಶ ಆಗಿದೆ. ಪೈಲಟ್ ಸುರಕ್ಷಿತ ಸ್ಥಳದಲ್ಲೇ ಲ್ಯಾಂಡ್ ಮಾಡಿದ್ದಾರೆ. ನಾನು ಕ್ಷೇಮವಾಗಿದ್ದೇನೆ, ಯಾವುದೇ ತೊಂದರೆ ಆಗಿಲ್ಲ ಎಂದು ಪೇಜಾವರಶ್ರೀಗಳು ತಿಳಿಸಿದ್ದಾರೆ.