ಪ್ರಮುಖ ಸುದ್ದಿ
ಧರ್ಮ ಸಂಸದ್ ಯಶಸ್ವಿ; ಮೊಸರಲ್ಲಿ ಕಲ್ಲು ಹುಡುಕುತ್ತಿರುವ ಸಾಹಿತಿಗಳು!
ಉಡುಪಿ: ವಿಶ್ವ ಹಿಂದೂ ಪರಿಷತ್ ನಿಂದ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಧರ್ಮ ಸಂಸದ್ ಯಶಸ್ವಿ ಆಗಿದೆ. ಧರ್ಮ ಸಂಸದ್ ಯಶಸ್ವಿ ಆಗಿದ್ದನ್ನು ಬುದ್ಧಿ ಜೀವಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾರಣ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ಮಾಡುತ್ತಿದ್ದಾರೆ ಎಂದು ಉಡುಪಿಯಲ್ಲಿಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸಂವಿಧಾನ ಬದಲಿಸಿ ಎಂದು ನಾನು ಹೇಳೇ ಇಲ್ಲ. ಸಂವಿಧಾನಕ್ಕೆ ಅಪಮಾನಿಸಿದರೆ ದೇಶಕ್ಕೆ ಅಪಮಾನಿಸಿದಂತಾಗುತ್ತದೆಂಬ ಅರಿವು ನನಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರಿಗೆ ನಾನೆಂದೂ ಅಪಮಾನ ಮಾಡಿಲ್ಲ. ಸಂವಿಧಾನ ಒಬ್ಬರೇ ರಚನೆ ಮಾಡಿದ್ದಲ್ಲ ಸಂವಿಧಾನ ರಚನೆ ಸಮಿತಿಯಲ್ಲಿ ಡಾ. ಅಂಬೇಡ್ಕರ್ ಅವರ ಜೊತೆಗೆ ಇತರೆ ಪ್ರಮುಖರೂ ಇದ್ದರು. ದೇಶದ ಎಲ್ಲಾ ಪ್ರತಿನಿಧಿಗಳು ಸೇರಿ ಸಂವಿಧಾನ ರಚಿಸಿದ್ದಾರೆ ಎಂದಿದ್ದೇನೆ. ದ್ವಾರಕನಾಥ್ ಅವರಂತ ಖ್ಯಾತ ವಕೀಲರೂ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು ವಿಪರ್ಯಾಸ ಎಂದು ಪೇಜಾವರಶ್ರೀ ಬೇಸರ ವ್ಯಕ್ತಪಡಿಸಿದರು.