ಪ್ರಮುಖ ಸುದ್ದಿ
ಪೆಟ್ರೋಲ್ ಸುರಿದು ಬಾರ್ ಗೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಮಂಡ್ಯದಲ್ಲಿ ಬಾರ್ ಗೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಮಂಡ್ಯಃ ಜಿಲ್ಲೆಯ ಮದ್ದೂರಿನ ಶಿವಪುರ ಗ್ರಾಮದಲ್ಲಿರುವ ನ್ಯೂಗೌಡ ಗಾರ್ಡನ್ ಬಾರ್ ಆ್ಯಂಡ್ ರೆಸ್ಡೋರೆಂಟ್ ಗೆ ನಿನ್ನೆ ರಾತ್ರಿ ದುಷ್ಕರ್ಮಿಗಳಿಬ್ಬರು ಬಾರ್ ಬಾಗಿಲು ಹಾಕಿದ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಬಾರ್ ಬಾಗಿಲು ಹಾಕೊಂಡು ಸಿಬ್ಬಂದಿ ಒಳಗಡೆ ಮಲಗಿರುವ ವೇಳೆ ದುಷ್ಕರ್ಮಿಗಳಿಬ್ಬರು ಪೆಟ್ರೋಲ್ ಹಾಕಿ ಬೆಂಕಿ ಹಚ್ಚುತ್ತಿದ್ದಂತೆ ಒಳಗಡೆ ಮಲಗಿದ್ದ ಸಿಬ್ಬಂದಿ ಎಚ್ಚೆತ್ತುಕೊಂಡು ಬೆಂಕಿ ನಂದಿಸುವ ಕೆಲಸಮಾಡಿದ್ದಾರೆ.
ಸಿಬ್ಬಂದಿ ಎಚ್ಚೆತ್ತುಕೊಂಡ ಪರಿಣಾಮ ಬಾರಿ ಅನಾಹುತ ತಪ್ಪಿದಂತಾಗಿದೆ. ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,
ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಮದ್ದರೂ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.