ಪ್ರಮುಖ ಸುದ್ದಿ

ಸದನದಲ್ಲಿ ಅಚ್ಚರಿ ನಿರ್ಧಾರ ಪ್ರಕಟ ಏನದು ಗೊತ್ತಾ..?

ಪೆಟ್ರೋಲ್ ನಾರಾಯಣ ಬಂಧಿಸದ ಸರ್ಕಾರ ಪ್ರಾಮಾಣಿಕ ಅಧಿಕಾರಿಗೆ ಅಮಾನತಿನ ಶಿಕ್ಷೆ.?

ಬೆಂಗಳೂರಃ ನಿನ್ನೆ ಬೆಳಕಿಗೆ ಬಂದಿರುವ ಕೆಆರ್ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಗೂಂಡಾ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣಸ್ವಾಮಿ ಯನ್ನು ಬಂಧಿಸಲು ಸೂಚಿಸಲಾಗಿದೆ. ಯಾರು ಕಾನೂನಿಗೆ ಮೀರಿದವರಲ್ಲ ಎಂದ ಅವರು, ಹಾಗೇ ನಾರಾಯಣಸ್ವಾಮಿ ಧಮ್ಕಿ ವಿಚಾರಕ್ಕೆ ಸಂಬಂಧಿಸಿದಂತೆ, ಆ ಅಧಿಕಾರಿ ಚಂಗಲ್ ಅವರು ಈ ಮೊದಲೇ ವಿಷಯ ಮೇಲಧಿಕಾರಗಳ ಗಮನಕ್ಕೆ ತರಬೇಕಿತ್ತು ಅವರು, ಮೇಲಧಿಕಾರಿಗಳಿಗೆ ತಿಳಿಸದ ಕಾರಣ ಅವರನ್ನು ಅಮಾನತುಗೊಳಿಸಲಾಗುತ್ತದೆ ಎಂದು ಸದನದಲ್ಲಿ ಗೃಹ ಸಚಿವರು ಪ್ರಕಟಿಸಿದರು.

ಬಿಬಿಎಂಪಿ ಕಚೇರಿಗೆ ತೆರಳಿ ಪೆಟ್ರೋಲ್ ಎರಚಿ ಕಚೇರಿಗೆ ಬೆಂಕಿ ಹಚ್ಚಲು ಮುಂದಾಗಿದ್ದ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಯವರನ್ನು ಇನ್ನು ಬಂಧಿಸದ ಸ್ಥಳೀಯ ಪೊಲೀಸರು ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿ ಆಧರಿಸಿ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಆತನ ಬಂಧನಕ್ಕೆ ಜಾಲ ಬೀಸಿದ್ದೇವೆ ಎಂಬ ಸಬೂಬು ನೀಡುತ್ತಾರೆ.

ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಶಾಸಕ ಭೈರತಿ ಮತ್ತು ಸಿಎಂ ಸಿದ್ರಾಮಯ್ಯನವರ ಆಪ್ತರಾಗಿದ್ದು, ಬಿಬಿಎಂಪಿ ಯಲ್ಲಿ ತನ್ನ ಅಕ್ರಮ ಕೆಲಸ ಮಾಡಿಕೊಡದ ಅಧಿಕಾರಿಯ ಕಚೇರಿಗೆ ತೆರಳಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲು ಮುಂದಾಗಿದ್ದರು.

ಇಂತಹ ಗೂಂಡಾಗಳನ್ನು ಆ ಸಿಬ್ಬಂದಿ ಹೇಗೆ ಎದುರಿಸಬೇಕು. ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ ಆದರೆ ಅವರನ್ನು ಅನತುಗೊಳಿಸುತ್ತೀರಾ ಎಂದ ಬಿಜೆಪಿ ಶಾಸಕ ಸುರೇಶಕುಮಾರ ಸದನದಲ್ಲಿ ಧ್ವನಿ ಎತ್ತಿದ ಕಾರಣ,  ಇದೀಗ ಸರ್ಕಾರ ಎಚ್ಷೆತ್ತುಕೊಂಡು ಯೂ ಟರ್ನ್ ಹೊಡೆದಿದೆ.

ಬಿಜೆಪಿ ಶಾಸಕ ಸುರೇಶಕುಮಾರ ಅವರು, ನೊಂದ ಪ್ರಾಮಾಣಿಕ ಅಧಿಕಾರಿಯನ್ನೇ ಅಮಾನತು ಮಾಡುವುದು ಸರಿಯಲ್ಲ. ಆರೋಪಿ ನಾರಾಯಣಸ್ವಾಮಿಯನ್ನು ಮೊದಲು ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಸದಸ್ಯರು ಸದನದಲ್ಲಿ ಧ್ವನಿ ಎತ್ತಿದಕಾರಣ ಅಮಾನತು ಆದೇಶ ವಾಪಾಸ್ಸು ಪಡೆಯುವದಾಗಿ ಗೃಹಸಚಿವರು  ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button