ಪ್ರಮುಖ ಸುದ್ದಿ
ಫೋನ್ ಕದ್ದಾಲಿಕೆ ಪ್ರಕರಣ : ತನಿಖೆ ಬದಲು ಮುಕ್ತಾಯಗೊಳಿಸಲು ಸಿಎಂ ಚಿಂತನೆ?
ಬೆಂಗಳೂರು : ಹೆಚ್.ಡಿ.ಕುಮಾಸ್ವಾಮಿ ಅಧಿಕಾರವಧಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣವನ್ನು ಮುಕ್ತಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸಾಮರಸ್ಯದ ಬದಲು ವೈಮನಸ್ಸು ಮೂಡಿ ಆಡಳಿತಕ್ಕೆ ಧಕ್ಕೆ ಆಗುವ ಕಾರಣ ಫೋನ್ ಕದ್ದಾಲಿಕೆ ಪ್ರಕರಣ ತನಿಖೆ ನಡೆಸುವ ಬದಲು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಬಿಎಸ್ ವೈ ಆಪ್ತರು, ಬಿಜೆಪಿ ನಾಯಕರು, ಅನರ್ಹಗೊಂಡಿರುವ ಶಾಸಕರು ಹಾಗೂ ಕೆಲ ಅಧಿಕಾರಿಗಳ ಬಂಡವಾಳವೂ ಬಯಲಾಗಲಿದೆ. ಪರಿಣಾಮ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ಬದಲು ಮುಕ್ತಾಯಗೊಳಿಸುವುದೇ ಲೇಸೆಂಬ ನಿರ್ಧಾರಕ್ಕೆ ಬಿಎಸ್ ವೈ ಬಂದಿದ್ದಾರೆ ಎನ್ನಲಾಗುತ್ತಿದ್ದು ನಾಳೆ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಜತೆ ಚರ್ಚಿಸಿ ಫೋನ್ ಕದ್ದಾಲಿಕೆ ಪ್ರಕಣದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.