ಪ್ರಮುಖ ಸುದ್ದಿ

ಈಜಲು ಹೋದ ಕುರಿಗಾಯಿ‌ ಇಬ್ಬರ ಸಾವು

ಹಳ್ಳದಲ್ಲಿ ಈಜಲು ಹೋಗಿದ್ದ ಕುರಿಗಾಹಿಗಳಿಬ್ಬರ ಸಾವು

ಕಲಬುರಗಿಃ ಹಳ್ಳದಲ್ಲಿ ಈಜಲು ಹೋಗಿ ಇಬ್ಬರು ಕುರಿಗಾಯಿಗಳು ಮೃತಪಟ್ಟ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಅರೆ ಬೊಮ್ಮನಹಳ್ಳಿ  ಗ್ರಾಮದಲ್ಲಿ ಬುಧವಾರ ಜರುಗಿದೆ.

ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ನಿವಾಸಿಗಳಾದ ಯಲ್ಲಪ್ಪ (28) ನರವಿರ ( 22) ಮೃತ ಯುವಕರು.

ಬೆಳಗ್ಗೆ ಕುರಿ ಕಾಯಲು ತೆರಳಿದ್ದ  ಯುವಕರು ಹಳ್ಳದ ಪಕ್ಕದಲ್ಲಿ ಕುರಿಗಳನ್ನ ಬಿಟ್ಟು ಈಜಾಡಲು ಹಳ್ಳಕ್ಕೆ ಇಳಿದಿದ್ದಾರೆ. ಆಗ
ನೀರಿನ ಸೆಳವಿಗೆ ಸಿಲುಕಿ ಹೊರಬರಲಾಗದೆ ಕುರಿಗಾಯಿಗಳಿಬ್ಬರು ಜಲಸಮಾಧಿಯಾಗಿದ್ದಾರೆ.

ವಿಷಯ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ  ಸ್ಥಳೀಯರ ನೇರವಿನಿಂದ ಪೊಲೀಸರು ಶವಗಳನ್ನು ಹೊರತೆಗೆದಿದ್ದಾರೆ. ಈ ಕುರಿತು ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button