ಡಿಗ್ರಿ ಕಾಲೇಜು ಆವರಣದಲ್ಲಿ 100 ಸಸಿ ನೆಟ್ಟ ವಿದ್ಯಾರ್ಥಿಗಳು
ಡಿಗ್ರಿ ಕಾಲೇಜು ಆವರಣದಲ್ಲಿ 100 ಸಸಿ ನೆಟ್ಟ ವಿದ್ಯಾರ್ಥಿಗಳು
ಶಹಾಪುರಃ ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ಕಾಲೇಜಿನ ಎನ್ನೆಸ್ಸೆಸ್ ಮತ್ತು ಅರಣ್ಯ ಇಲಾಖೆ ಸಂಯೋಜನೆಯಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎನ್ನೆಸ್ಸೆಸ್ ಎನ್ನೆಸ್ಸೆಸ್ ಅಧಿಕಾರಿ ಡಾ.ರಾಜು ಶಾಮರಾವ್ ಮಾತನಾಡಿ, ಕಾಲೇಜು ಪ್ರದೇಶದಲ್ಲಿ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳಿಂದ 100 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಅರಣ್ಯ ಬೆಳೆಸುವ ಮೂಲಕ ಉತ್ತಮ ವಾತಾವರಣ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಪಣತೊಟ್ಟಿದ್ದು, ಮುಂಬರುವ ದಿನಗಳಲ್ಲಿ ಸಸಿಗಳ ಸಂರಕ್ಷಣೆ ಮಾಡುವದಾಗಿ ಪಣ ತೊಡಲಾಗಿದೆ.
ಇದಕ್ಕೆ ಕಾಲೇಜಿನ ಸಿಬ್ಬಂದಿ, ಉಪನ್ಯಾಸಕ ವರ್ಗ ಸೇರಿದಂತೆ ಸರ್ವ ವಿಭಾಗದ ವಿದ್ಯಾರ್ಥಿಗಳ ಸಹಕಾರವು ಬೇಕಿದೆ. ಗಿಡಮರಗಳನ್ನು ಬೆಳೆಸಿದಲ್ಲಿ ಕಾಲೇಜಿನ ವಾತಾವರಣ ಉತ್ತಮವಾಗಿರಲಿದೆ. ವಿದ್ಯಾಭ್ಯಾಸಕ್ಕೂ ಅದರಿಂದ ಸಹಕಾರಿಯಾಗಲಿದೆ. ಪ್ರಸ್ತುತ ಕಾಲಮಾನದಲ್ಲಿ ಹಸಿರುಕರಣ ಬಹುಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಭೀಮರಾಯನ ಗುಡಿ ಅರಣ್ಯ ಇಲಾಖೆ ವಲಯ ಅಧಿಕಾರಿ ಐ.ಬಿ.ಹೂಗಾರ, ಆಂಗ್ಲ ಭಾಷೆಯ ಸಹಾಐಕ ಪ್ರಾಧ್ಯಾಪಕ ಆನಂದಕುಮಾರ ಸಾಸನೂರ ಸೇರಿದಂತೆ ವಿದ್ಯಾರ್ಥಿಗಳಾದ ಆನಂದ ನಾಯಕ, ನಾಗರಾಜ ಕೊಂಬಿನ್, ಆನಂದ ಹೋತಪೇಟವ, ಮಲ್ಲಿಕಾರ್ಜುನ ನಾಯ್ಕೋಡಿ, ಅವಿನಾಶ ಪಟ್ಟೇದಾರ, ಚಿಕ್ಕಣ್ಣ ಭಾಗವಹಿಸಿದ್ದರು.