ಪ್ರಮುಖ ಸುದ್ದಿ
ಪಣಜಿ ಎಸ್ಎಜಿ ಗ್ರೌಂಡ್ ನಲ್ಲಿ ಪರ್ರಿಕರ್ ಅಂತ್ಯಕ್ರಿಯೆ
ಸೋಮವಾರ ಸಂಜೆ ಪಣಜಿಯಲ್ಲಿ ಪರ್ರಿಕರ್ ಅಂತ್ಯಕ್ರಿಯೆ
ಗೋವಾಃ ಸಿಎಂ ಮನೋಹರ ಪರ್ರಿಕರ್ ಅವರ ಅಂತಿಮ ದರ್ಶನವನ್ನು ಪಣಜಿಯ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 9;30 ರಿಂದ 10 ;30 ರವರೆಗೆ ವ್ಯವಸ್ಥೆ ಮಾಡಲಾಗಿದೆ.
ನಂತರ ಕಲಾ ಅಕಾಡಮೆಯಲ್ಲಿ ಸಂಜೆ 4 ಗಂಟೆವರೆಗೆ ಸಾರ್ವಜನಿಕ ದರ್ಶನ ಕಲ್ಪಿಸಲಾಗುವದು.
ತದ ನಂತರ 4 ಗಂಟೆಯಿಂದ ಎಸ್ಎಜಿ ಮೈದಾನದವರೆಗೆ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ 5 ಗಂಟೆಗೆ ಸೋಮವಾರ ಸಂಜೆ ಸರ್ಕಾರಿ ಗೌರವದೊಂದಿಗೆ ಎಸ್ಎಜಿ ಮೈದಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.