ಮರಳು ತುಂಬಿದ ವಾಹನ ತಪಾಸಣೆಗೆ ಆಗ್ರಹ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಿತಿ ಮೀರಿ ನಡೆಯುತ್ತಿದೆ ಇದನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಕೂಡಲೇ ಮರಳು ಸಾಗಾಣಿಕೆ ಮಾಡುವ ವಾಹನಗಳ ಕ್ಷೀಪ್ರ ತಪಾಸಣೆ ನಡೆಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಶಹಾಪುರ ತಾಲೂಕಿನ ಹತ್ತಿಗೂಡುರ ಗ್ರಾಮ ಬಳಿ ರಾಜ್ಯ ಹೆದ್ದಾರಿ ಮೇಲೆ ಮಿತಿ ಮೀರಿ ಮರಳು ಸಾಗಾಣಿಕೆ ಮಾಡುವ ವಾಹನಗಳಿಗೆ ಹಿಂದೆ ನಂಬರ್ ಪ್ಲೇಟ್ ಇರುವುದಿಲ್ಲ ಇದರಿಂದ ಅಪಘಾತ ಸಂಭವಿಸಿದಾಗ ಮರಳು ವಾಹನ ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ದೂರಿದರು.
ಹತ್ತಿಗೂಡೂರ ಬಳಿ ಇರುವ ಮರಳು ತಪಾಸಣೆ ಕೇಂದ್ರದಲ್ಲಿ ವಾಹನಗಳನ್ನು ಕ್ರಮಬದ್ಧ ತಪಾಸಣೆ ನಡೆಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರತ್ನ ವಿ.ಪಾಟೀಲ್, ಶರಣರಡ್ಡಿ ಹತ್ತಿಗೂಡೂರ, ಮಲ್ಕಣ್ಣ ಚಿಂತಿ, ಹಣಮಂತ ಕೊಂಗಂಡಿ, ಶರಣು ಮದ್ರಿಕಿ ಸೇರಿದಂತೆ ಇತರರಿದ್ದರು.