ರೈತರೇ ಗಮನಿಸಿ: ಈ 2 ಕೆಲಸ ಮಾಡದಿದ್ರೆ ಸಿಗಲ್ಲ ಪಿಎಂ ಕಿಸಾನ್ 18ನೇ ಕಂತಿನ ಹಣ

(Pm -Kisan) ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯೂ ಒಂದು. ಈ ಯೋಜನೆಯಲ್ಲಿ ಅರ್ಹ ರೈತರಿಗೆ ಮೂರು ಕಂತಿಗಳಲ್ಲಿ 2000 ನಂತೆ 6000 ರೂ ಗಳನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ.
ಸರ್ಕಾರವು 17 ಕಂತುಗಳನ್ನು ಬಿಡುಗಡೆ ಮಾಡಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ವಾರಣಾಸಿಯಿಂದ ಬಿಡುಗಡೆ ಮಾಡಿದ್ದರು. ಈಗ ಯೋಜನೆಯ ಮುಂದಿನ ಹಂತ ಅಂದರೆ 18 ನೇ ಹಂತ ಇನ್ನೂ ಬಂದಿಲ್ಲ. ಕಿಸಾನ್ ಯೋಜನೆಯ 18 ನೇ ಹಂತವನ್ನು ಭಾರತ ಸರ್ಕಾರವು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆದರೆ ಕಂತು ಬರುವ ಮೊದಲು ರೈತರು ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ಅವರ ಕಂತುಗಳ ಮೊತ್ತವು ಸ್ಥಗಿತಗೊಳ್ಳಬಹುದು.
ಈ ಬಗ್ಗೆ ಸರ್ಕಾರ ಈಗಾಗಲೇ ರೈತರಿಗೆ ಮಾಹಿತಿ ನೀಡಿದೆ. ಈ ಯೋಜನೆಗಾಗಿ, ಫಲಾನುಭವಿ ರೈತರು ಇ-ಕೆವೈಸಿ ಮತ್ತು ಭೂಮಿ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ಇಲ್ಲಿಯವರೆಗೆ ಈ ಕೆಲಸ ಮಾಡದ ರೈತರು ಅದನ್ನು ತಕ್ಷಣ ಮಾಡುವುದು ಉತ್ತಮ. ಇಲ್ಲದಿದ್ದರೆ, ಮುಂದಿನ ತಿಂಗಳಿನ ಕಂತು ಸ್ಥಗಿತವಾಗಬಹುದು. ಜಮೀನಿನ ವಿವರಗಳನ್ನು ಪರಿಶೀಲಿಸದ ಫಲಾನುಭವಿಗಳು ಸಂಬಂಧಿಸಿದ ತಹಸಿಲ್ದಾರ್ ಕಚೇರಿಯಲ್ಲಿ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವುದು ಅವಶ್ಯಕ.