ಪ್ರಮುಖ ಸುದ್ದಿ
ಜನ್ಮದಿನಃ ತಾಯಿಯೊಂದಿಗೆ ಊಟ ಸವಿದ ಪ್ರಧಾನಿ ಮೋದಿ
ಜನ್ಮದಿನಃ ತಾಯಿಯೊಂದಿಗೆ ಊಟ ಸವಿದ ಪ್ರಧಾನಿ ಮೋದಿ
ವಿವಾ ಡೆಸ್ಕ್ಃ ತಮ್ಮ 69 ನೇ ಜನ್ಮ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿಜಿ ನಿನ್ನೆ ಅವರ ತಾಯಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಅಲ್ಲದೆ ಅವರೊಂದಿಗೆ ಊಟ ಸವಿಯುವ ಮೂಲಕ ಮಾದರಿ ಎನಿಸಿದರು.
ಗುಜರಾತ್ ನ ಗಾಂಧಿನಗರದಲ್ಲಿ ಇರುವ ಸಹೋದರ ಪಂಕಜ್ ಮೋದಿ ನಿವಾಸದಲ್ಲಿರುವ ತಾಯಿ ಹೀರಾಬೆನ್ ಅವರನ್ನು ಭೇಟಿಯಾದ ಮೋದಿ ಮನೆಯವರೊಂದಿಗೆ ಒಂದಿಷ್ಟು ಸಮಯ ಕಳೆದರು.
ಇದೇ ಸಮಯದಲ್ಲಿ ಅಕ್ಕ ಪಕ್ಕದ ಮನೆಯವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದು ವಿಶೇಷವಾಗಿತ್ತು. ಸೆ. 16 ರಾತ್ರಿಯಂದೆ ಅವರು ಗುಜರಾತ್ ಗೆ ಆಗಮಿಸಿದ್ದರು.