ಸಾಹಿತ್ಯ
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರು ಯಾರು, ಎಲ್ಲಿ ನಡೆಯುತ್ತೆ ಕನ್ನಡ ಜಾತ್ರೆ?
ಈಬಾರಿ ಕನ್ನಡ ಜಾತ್ರೆ ಬಲು ಜೋರು ರೀ…!
ಮಂಗಳೂರು: 83 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿ ಸಾಹಿತಿ ಚಂದ್ರಶೇಖರ್ ಪಾಟೀಲ್ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಮನು ಬಳಿಗಾರ ತಿಳಿಸಿದ್ದಾರೆ. ನಗರದ ಹೊರವಲಯದಲ್ಲಿರುವ ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿಂದು ಕಸಾಪ 101 ನೇ ವಾರ್ಷಿಕ ಸಭೆ ನಡೆಯಿತು. ಸಭೆಯಲ್ಲಿ ಒಮ್ಮತದ ಮೂಲಕ ಚಂಪಾ ಅವರನ್ನು ಸಮ್ಮೇಳನಾದ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
2017-18 ನೇ ಸಾಲಿನ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯಲಿದೆ. ನವೆಂಬರ್ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ಕನ್ನಡ ಜಾತ್ರೆ ನಿಗದಿಪಡಿಸಲಾಗಿದೆ. ಈ ವರ್ಷ ಬಂಡಾಯ ಸಾಹಿತಿ, ಕವಿ, ಹೋರಾಟಗಾರರು ಹಾಗೂ ಅಪ್ಪಟ ಉತ್ತರ ಕರ್ನಾಟಕ ಭಾಷೆಯ ತೀಕ್ಷ್ಣ ಮಾತು-ಬರಹಗಳ ಮೂಲಕ ನಾಡಿನ ಗಮನ ಸೆಳೆದಿರುವ ಚಂಪಾ ಅವರು ಸಮ್ಮೇಳನಾದ್ಯಕ್ಷರಾಗಿದ್ದಾರೆ. ಆ ಮೂಲಕ ಈ ಬಾರಿಯ ಸಾಹಿತ್ಯ ಸಮ್ಮೇಳನ ವಿಶೇಷ ಗಮನ ಸೆಳೆಯಲಿದೆ ಎಂಬುದು ಸಾಹಿತ್ಯಾಸಕ್ತರ ಅಭಿಪ್ರಾಯವಾಗಿದೆ.