ಕಾವ್ಯಕ್ಯಾಂಪಸ್ ಕಲರವ

ಕವಿತೆಯಲ್ಲಿ ವೈಜ್ಞಾನಿಕ ಅರಿವಿರಲಿ-ಸಾಹಿತಿ ಗೊಂದೆಡಗಿ

ಅಧ್ಯಯನವಿರದ ಬರವಣಿಗೆಯಲ್ಲಿ ಬದ್ಧತೆ ಕಾಣಲ್ಲ

ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ-2

ಯಾದಗಿರಿಃ ಅಸೂಯೆ ಧ್ವೇಷದಿಂದ ಚಂದದ ಅಂದದ ನಾಡು ಕಟ್ಟಲಾಗುವದಿಲ್ಲ. ಕವಿಗಳಾದವರು ಕಾವ್ಯ ರೂಪದಲ್ಲಿ ಅಜ್ಞಾನ ಅಳಿದು ಸುಜ್ಞಾನ ಬಿತ್ತುವ ಕೆಲಸ ಮಾಡಬೇಕು.ಕವಿತೆಗೆ ವೈಜ್ಞಾನಿಕ ಅರಿವಿರಬೇಕು ಎಂದು ಸಾಹಿತಿ ಗೊಂದೆಡಗಿ ವಿಶ್ವನಾಥರಡ್ಡಿ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಮಂಗಳವಾರ ನಡೆದ ಕವಿಗೋಷ್ಠಿ-2 ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶಯ ನುಡಿಗಳನ್ನಾಡಿದರು.

ಕವಿ ಯಾರ ಗುಲಾಮನಲ್ಲ. ಗುಲಾಮನಾಗಿರಬಾರದು. ಕವಿಯ ಅತೀವ ಆಲೋಚನೆಯಿಂದ ಹೊರಹೊಮ್ಮಿದ ಕಾವ್ಯ ಸಿರು, ಸೃಜನ, ಜಗ ಮತ್ತು ಸಮಾಜಮುಖಿ ಅಂಶಗಳನ್ನು ಒಳಗೊಂಡರಲು ಸಾಧ್ಯವಿದೆ. ಓದದೆ ಸಮರ್ಪಕ ಅಧ್ಯಯನವಿರದೆ ಬರವಣಿಗೆಯಲ್ಲಿ ಯಾವುದೇ ಬದ್ಧತೆ ಕಾಣುವದಿಲ್ಲ. ಅಧ್ಯಯನವಿಲ್ಲದೆ ಬರೆದರೂ ಅದು ಕಾವ್ಯವಾಗಲ್ಲ. ಕವಿ ಆಗುವುದು ಅದೃಷ್ಟವಲ್ಲ. ಓದು ಅಧ್ಯಯನ ಫಲ ಅದು.

ಓರ್ವ ಕವಿ ಶೋಷಣೆಗಾರರ ಜೊತೆ ಇರಬಾರದು ಶೋಷಿತರ ಜೊತೆ ಇರಬೇಕು. ಕವಿ ಬೇಟೆಯ ಜೊತೆ ಇರುತ್ತಾನೆ ಬೇಟೆಗಾರನ ಜೊತೆಯಲ್ಲ. ಕಂಗಲಾದವರ ಜೊತೆ ಕವಿ ಇರುತ್ತಾನೆ. ಕವಿ ಶಾಶ್ವತ ಶಾಸಕ ಕೂಡ. ಕಾವ್ಯ ನಮ್ಮ ಆಸ್ತಿ, ಹಕ್ಕು ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗ. ಕವಿಯಾದವನು ಜೀವ ಪರವಾಗಿರುತ್ತಾನೆ. ಸತ್ಯವನ್ನು ಬೆತ್ತಲೆ ಮಾಡುವ ಶಕ್ತಿ ಆತನಲ್ಲಿರುತ್ತದೆ.

ಎಂಎಂ ಕಲಬುರ್ಗಿ ಅವರು ಹೇಳಿದಂತೆ ಕಾಮೇಚ್ಛ ಮನ ಬಂದಂತ ವರ್ತಿಸುತ್ತದೆ ಆದರೆ ಏಡ್ಸ್ ಅದನ್ನು ಗುರುತಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಯುವ ಕವಿ ಪ್ರತಿಭೆಗಳಿಗೆ ತಿಳಿಸಿದರು.
ನಂತರ ಅಧ್ಯಕ್ಷತೆ ಭಾಷಣ ಮಾಡಿದ ಸಾಹಿತಿ ಡಾ.ಅಬ್ದುಲ್ ಕರೀಂ ಮಾತನಾಡಿ, ಕವನಗಳನ್ನ ವಾಚನ ಮಾಡಿದ ಕವಿಗಳೆಲ್ಲರಿಗೂ ಪ್ರಸ್ತುತ ವಾಸ್ತವಿಕತೆಯನ್ನು ಅರ್ಥೈಸಿಕೊಂಡು ಕಾವ್ಯಗಳನ್ನು ರಚಿಸಿದ್ದಾರೆ.

ಆ ಜ್ಞಾನ ಅವರಲ್ಲಿ ಕಂಡು ಬಂದಿರುವದು ಸಂತಸಕರ ವಿಷಯ. ಇನ್ನೂ ನೈತಿಕಥೆ ಇಲ್ಲದವರು ಕವಿಯಾಗಲು ಸಾಧ್ಯವಿಲ್ಲ. ಬರೆಯುವ ನುಡಿಯುವ ಕಾವ್ಯದಂತೆ ಅವರ ನಡೆಯಾಗಿರಬೇಕು.

ಚನ್ನಣ್ಣ ವಾಲಿಕಾರ ಬರೆದಂತೆ ಯಾವ ಅಕ್ಷರದಲಿ ಬರೆಯಲಿ ನನ್ನವರ ಎದೆಯ ಬ್ಯಾನಿ ಎಂಬಂತೆ, ಯುವ ಕವಿಗಳು ಆತ್ಮತೃಪ್ತಿಯ ಜೊತೆಗೆ ಸಾರ್ವತ್ರಿಕ ನ್ಯಾಯಸಿಗಬೇಕು. ಕಾವ್ಯದಲ್ಲಿ ಶೀಲವಂತ, ನೈತಿಕಥೆ ಬಹುಮುಖ್ಯವಾಗಿದೆ.
ಯುವ ಪ್ರತಿಭೆ ಮರೆಪ್ಪ ನಾಟೇಕಾರ ವಾಚಿಸಿದ ಸರಸ್ವತಿ ನನಗೂ ಒಮ್ಮೆ ಹೆಂಡತಿಯಾಗು ಎಂಬುದರ ಸಾಲು ತಪ್ಪಾಗಿ ಅರ್ಥೈಸಿಕೊಳ್ಳದೆ ಅದು ಜ್ಞಾನ ನನ್ನದಾಗಲಿ ಎಂಬ ಹಂಬಲ ಆ ಕಾವ್ಯದಲ್ಲಿದೆ. ಅಲ್ಲದೆ ಇತರರು ಜಾತಿ, ಶೋಷಣೆ, ಧರ್ಮ, ಕನ್ನಡ ನಾಡು, ಸ್ತ್ರೀ ಶೋಷಣೆ, ಮೌನ ಸೇರಿದಂತೆ ಸಮಗ್ರ ವಿಷಯಗಳ ಮೇಲೆ ಕಾವ್ಯ ರೂಪದಲ್ಲಿ ಬೆಳಕು ಚಲ್ಲಿದ್ದಾರೆ ಎಂದರು.

ಮರೆಪ್ಪ ನಾಟೇಕಾರ, ಬಸವರಾಜ ಕಲೇಗಾರ, ಮಹಾಲಕ್ಷ್ಮೀ ಹಿರೇಮಠ, ಅಶೋಕ ಚೌದ್ರಿ, ಖಾಸಿಂ ಅಲಿ ಹುಜರತಿ, ಪಂಚಾಕ್ಷರಿ ಹಿರೇಮಠ, ಚಂದ್ರಕಲಾ ಗೂಗಲ್, ಭೀಮರಾಯ, ಮಡಿವಾಳಪ್ಪ ಪಾಟೀಲ್, ವೀರಣ್ಣ ಕಲಿಕೇರಿ ಸೇರಿದಂತೆ ಇತರರು ಕವನಗಳನ್ನು ವಾಚಿಸಿದರು. ವಾಚಕರೆಲ್ಲರಿಗೂ ಸರ್ವಾಧ್ಯಕ್ಷ ಹೊನ್ಕಲ್ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಬಸವರಾಜ ಸಿನ್ನೂರ ನಿರೂಪಿಸಿದರು. ಸುರೇಶ ತಡಿಬಿಡಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button