ಪ್ರಮುಖ ಸುದ್ದಿ
ಹುಂಜಗಳ ಕಾಳಗ ಅಡ್ಡೆ ಮೇಲೆ ದಾಳಿ 6 ಜನ ವಶಕ್ಕೆ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಹಾಲಬಾವಿ ಗ್ರಾಮ ಸೀಮಾಂತರದಲ್ಲಿ ಬರುವ ಹಾಲಬಾವಿ ಶಹಾಪುರ ರಸ್ತೆ ಬದಿಯ ಸಾರ್ವಜನಿಕ ಪ್ರದೇಶದಲ್ಕಿ (ಕೋಳಿ) ಹುಂಜಗಳ ಕಾಳಗ ನಡೆಯುತ್ತಿದ್ದ ಸ್ಥಳಕ್ಕೆ ದಿಡೀರ ದಾಳಿ ನಡೆಸಿದ ಪೊಲೀಸರು, ಬೆಟ್ಳಿಂಗ ನಡೆಸುತ್ತಿದ್ದ ಸಾಯಬಣ್ಣ ಸೇರಿದಂತೆ 5 ಜನರನ್ನು ವಶಕ್ಕೆ ಪಡೆದ ಘಟನೆ ರವಿವಾರ ಸಂಜೆ ನಡೆದಿದೆ.
ವಶಕ್ಕೆ ಪಡೆದ ಆರೋಪಿಗಳಿಂದ 2100 ರೂ. ನಗದು ಮತ್ತು ಮೂರು ಹುಂಜಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹುಂಜಾಗಳ ಕಾಲುಗಳಿಗೆ ಬ್ಲೇಡ್ ಕಟ್ಟಿ ಎರಡು ಹುಂಜಗಳ ಮದ್ಯ ಕಾಳಗವೇ ಏರ್ಪಡಿಸಲಾಗುತ್ತದೆ. ಈ ಹುಂಜಗಳ ಮೇಲೆ ಲಕ್ಷಾಂತರ ರೂ ಬೆಟ್ಟಿಂಗ್ ನಡೆದಿರುತ್ತದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು, ಆರು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಾಹೇಬಣ್ಣ ಮತ್ತು ಆತನ ಜೊತೆ ಐದು ಮಂದಿ ಸಂಗಡಿಗರ ಮೇಲೆ ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 89 ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ನಡೆಸಿದ ಅಪರಾಧ ಅಡಿ ಪ್ರಕರಣ ದಾಖಲಾಗಿದೆ.