ಚಕ್ ಪೋಸ್ಟ್‌ಃ ಪೊಲೀಸರ ಜೊತೆ ಸೋಂಕಿತನ ಹೈಡ್ರಾಮ
ಚಕ್ ಪೋಸ್ಟ್‌ಃ ಪೊಲೀಸರ ಜೊತೆ ಸೋಂಕಿತನ ಹೈಡ್ರಾಮ
ಯಾದಗಿರಿಃ ಕಾರು ಚಾಲಕನೋರ್ವ ವಾಹನ ಸಮೇತ ಇಲ್ಲಿನ ಡಿಗ್ರಿ ಜಾಲೇಜ್ ಚಕ್ ಪೋಸ್ಟ್ ನಲ್ಲಿ ಪೊಲೀಸರು ಕೈ ಮಾಡಿದರೂ ನಿಲ್ಲಿಸದೆ ರಭಸವಾಗಿ ಬಂದು ಚಕ್ ಪೋಸ್ಟ್ ನಲ್ಲಿ ಹಾಕಿದ್ದ ವಾಹನ ತಡೆ ಗೇಟ್ಗೆ ಡಿಕ್ಕಿ ಹೊಡೆದು ಹಾಗೆ ತೆರಳಿದ್ದಾನೆ. ಬೆನ್ನುಬಿಡದ ಪೊಲೀಸರು ಚಾಲಕನನ್ನು ಹಿಡಿದಿದ್ದಾರೆ.
ಆಗ ಎಲ್ಲಿಂದಲೋ ಸ್ಥಳಕ್ಕೆ ಬಂದ ಕೊರೊನಾ ಸೋಂಕಿತ ವ್ಯಕ್ತಿಯೋರ್ವ ತನ್ನ ಕಾರು ಮತ್ತು ಡ್ರೈವರ್ ನನ್ನು ಏಕೆ ಹಿಡಿದಿದ್ದೀರಿ ಎಂದು ವಾಗ್ವಾದಕ್ಕೆ ಇಳಿದು ಹೈಡ್ರಾಮವೇ ಸೃಷ್ಟಿಸಿದ್ದಾನೆ.
ನಡು ರಸ್ತೆಯಲ್ಲಿ ಪೊಲೀಸರೊಂದಿಗೆ ಅಸಂಬದ್ಧ ವಾದಕ್ಕೆ ಇಳಿದ ಸೋಂಕಿತನಿಗೆ ಪೊಲೀಸರು ಎಷ್ಟೇ ಬುದ್ಧಿವಾದ ಹೇಳಿದರು ಸುಮ್ಮನಾಗದೆ ವಾದ ನಡೆಸಿದ್ದಾನೆ.
ನಂತರ ಸ್ಥಳಕ್ಕೆ ಬಂದ ಸಿಪಿಐ ಕೆಂಚರಡ್ಡಿ ಆಗಮಿಸಿ ಸೋಂಕಿತನಿಗೆ ಕ್ಲಾಸ್ ತೆಗೆದುಕೊಂಡು, ಕ್ವಾರಂಟೈನ್ ವೈಲೆನ್ಸ್ ಪ್ರಕರಣ ದಾಖಲಿಸಿದ್ದಾರೆ.
ಕೋವಿಡ್ ಸೋಂಕಿತನಾಗಿದ್ದರು ಹೊರಗಡೆ ಹೇಗೆ ಬಂದಿದ್ದೀಯಾ.? ನೀನು ಸಾಯೋದು ಅಲ್ಲದೆ ಜನರನ್ನು ಸಾಯೋಸೋನು ನೀನೆಂದು ಜಾಡಿಸಿದ್ದಾರೆ. ಕಾರನ್ನು ಸೀಜ್ ಮಾಡಿ ಸೋಂಕಿತನ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.