ಹೈಟೆಕ್ ಕಳ್ಳರ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
ಶಹಾಪುರಃ ಆಂದ್ರ ಮೂಲದ ನಾಲ್ವರ ಕಳ್ಳರ ಬಂಧನ
2.65 ಲಕ್ಷ ನಗದು, ಎರಡು ಬೈಕ್ ವಶಕ್ಕೆ
ಯಾದಗಿರಿ, ಶಹಾಪುರಃ ಕಳೆದ ಎರಡು ಮೂರು ವರ್ಷದಿಂದ ಯಾದಗಿರಿ ಜಿಲ್ಲಾದ್ಯಂತ ಮನೆ, ಬ್ಯಾಂಕ್ ಸೇರಿದಂತೆ ಇತರೆ ಅಂಗಡಿಗಳಲ್ಲಿ ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಹೈಟೆಕ್ ಆಂದ್ರ ಮೂಲದ ನಾಲ್ವರು ಕಳ್ಳರನ್ನು ನಗರದ ಕೆಇಬಿ ಹತ್ತಿರ ಸೋಮವಾರ ಬೆಳಗಿನ ಜಾವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಿನ ಜಾವದಲ್ಲಿ ಐದು ಜನ ಕಳ್ಳರು ಎರಡು ಬೈಕ್ ಮೇಲೆ ಕೆಇಬಿ ಹತ್ತಿರ ನಿಂತು ಚರ್ಚೆಯಲ್ಲಿದ್ದಾಗ, ಪೊಲೀಸರು ಅನುಮಾ ಬಂದು ಅವರ ಹತ್ತಿರ ತೆರಳುತ್ತಿದ್ದಂತೆ ಬೈಕ್ ಬಿಟ್ಟು ಓಡಲು ಯತ್ನಿಸಿದ್ದಾರೆ.
ಬೆನ್ನು ಹತ್ತಿದ್ದ ಪೊಲೀಸರು, ಅವರಲ್ಲಿ ನಾಲ್ವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಓರ್ವ ಕಳ್ಳ ಪರಾರಿಯಾಗಿದ್ದಾನೆ.
ನಾಲ್ವರನ್ನು ಠಾಣೆಗೆ ಕರೆ ತಂದು ವಿಚಾರಿಸಲಾಗಿ, ಶಹಾಪುರದಲ್ಲಿ ನಾಲ್ಕು ಯಾದಗಿರಿಯಲ್ಲಿ ನಾಲ್ಕು ಕಳ್ಳತನ ಪ್ರಕರಣ ಸೇರಿದಂತೆ ಸುರಪುರದ ಎರಡು ಪ್ರಕರಣಗಳಲ್ಲಿ ಬಂಧಿತ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಯಾದಗಿರಿಯ ಲಕ್ಕಿ ನಗರದಲ್ಲಿ ಬಾಡಿಗೆ ಮನೆ ಮಾಡಿರುವ ವಿಷಯ ತಿಳಿದು ಆರೋಪಿಗಳನ್ನು ಅಲ್ಲಿಗೆ ಕರೆದೊಯ್ದು ಪರಿಶೀಲನೆ ನಡೆಸಲಾಗಿ, ಅವರ ಸಂಬಧಿಯೊಬ್ಬರ ಹತ್ತಿರ ತಾವುಗಳು ದುಡಿದ ಹಣವೆಂದು ಕೂಡಿಟ್ಟ 2.65 ಲಕ್ಷ ರೂ. ನಗದು ಸೇರಿದಂತೆ ಕಳ್ಳತನ ಕೃತ್ಯಕ್ಕೆ ಬಳಸುತ್ತಿದ್ದ, ಒಂದು ಅಪಾಚಿ ದ್ವಿಚಕ್ರವಾಹನ ಇನ್ನೊಂದು ಹೋಂಡಾ ಯೂನಿಕಾರ್ನ್ ಮೋಟಾರ ಸೈಕಲ್‍ನ್ನು ವಶಕ್ಕೆ ಪಡೆದಿದ್ದಾರೆ.
2017 ರಿಂದ ಇಲ್ಲಿವರೆಗೂ ಯಾದಗಿರಿ, ಸುರಪುರ ಮತ್ತು ಶಹಾಪುರದ ಹಲವಾರು ಬ್ಯಾಂಕ್‍ಗಳಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ, ಜನರನ್ನು ಯಾಮಾರಿಸಿ ಬಿಸ್ಕಿಟ್ ನೀರು ಕಲಿಸಿದ ನೀರು ಸಿಮಿಸಿ ಹಲಸು ಹತ್ತಿದೆ ನೋಡಿಕೊಳ್ಳಿ ಎಂದು ಹಣ ಕಸಿದುಕೊಂಡು ಪರಾರಿಯಾದ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ ಭಗವಾನ್ ಮತ್ತು ಸುರಪುರ ಡಿಎಸ್ಪಿ ಶಿವನಗೌಡ ಅವರ ಸೂಕ್ತ ಮಾರ್ಗದರ್ಶನದಂತೆ ಶಹಾಪುರ ಸಿಪಿಐ ನಾಗರಾಜ ಜೆ. ಯವರ ನೇತೃತ್ವದಲ್ಲಿ ಎಚ್.ಸಿ.ಗಳಾದ ಹೊನ್ನಪ್ಪ ಭಜಂತ್ರಿ, ಬಾಬು ಗಜೇಂದ್ರ, ಪಿಸಿ ಸತೀಶಕುಮಾರ ಗಣಪತಿ, ಬಸವರಾಜ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಸಾಧಿಸಿದ್ದರು.
ಬಂಧಿತ ಆರೋಪಿಗಳ ಹೆಸರು ಮೂಲ ಮತ್ತು ಕಸಬು
ಬಾಣಾಲ್ ಸುಭಾಶ (29) (ಆಟೋ ಡ್ರೈವರ್), ಅವುಲ್ ಅಮೋಸ್ (35) ಮೀನು ವ್ಯಾಪಾರ, ಅವುಲ್ ವಿಜ್ಜೋನ್(40) (ಟಿಫಿನ್ ಸೆಂಟರ್), ಗೋಗುಲ್ ರಾಜೇಶ (24) (ಪೇಂಟಿಂಗ್ ಕೆಲಸ) ಎಲ್ಲಾ ಆರೋಪಿಗಳು ಆಂದ್ರಪ್ರದೇಶ ಮೂಲದ ನೆಲ್ಲೂರ ಜಿಲ್ಲೆಯ ಕಪರಾಲಾ ತಾಲೂಕಿನ ದಗದರ್ತಿ ಗ್ರಾಮದವರೆಂದು ತಿಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಲ್ಲದೆ ಇನ್ನೋರ್ವ ಪರಾರಿಯಾದ ಆರೋಪಿಯ ಹೆಸರು ಅವುಲ್ ರಾಕೇಶ (22) (ಕೂಲಿ ಕೆಲಸ)ಮಾಡುತ್ತಿದ್ದ ಆತನ ಓಡಿ ಹೋಗಿದ್ದಾನೆ ಎಂದು ಬಂಧೀತ ಆರೋಪಿಗಳು ತಿಳಿಸಿದ್ದಾರೆ.