ಪ್ರಮುಖ ಸುದ್ದಿ
ಕಲಬುರಗಿ: ರಿಂಗ್ ರೋಡಿನಲ್ಲಿ ಪೊಲೀಸರಿಂದ ಫೈರಿಂಗ್!
ಕಲಬುರಗಿ: ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ದರೋಡೆಕೋರನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಕಳೆದ ರಾತ್ರಿ ವೇಳೆ ಅಮರ್ ವೈನ್ಸ್ ಮಾಲೀಕನಿಗೆ ಬೆದರಿಸಿ ದರೋಡೆ ಮಾಡಿದ್ದ ಕುಖ್ಯಾತ ದರೋಡೆಕೋರ ಇರ್ಫಾನ್ ಮತ್ತು ಆತನ ಸಹಚರರು ಎಸ್ಕೇಪ್ ಆಗಲು ಸ್ಕೆಚ್ ಹಾಕಿದ್ದರು. ಆದರೆ, ಆರೋಪಿಗಳನ್ನು ಬೆನ್ನುಹತ್ತಿದ್ದ ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿ ಇರ್ಫಾನ್ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಪಿಎಸ್ ಐ ವಾಹಿದ್ ಮತ್ತು ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿದ್ದುದನ್ನು ಅರಿತ ಪೊಲೀಸರು ಗುಂಡು ಹಾರಿಸಿದ್ದಾರೆ. ಪರಿಣಾಮ ಆರೋಪಿ ಇರ್ಫಾನ್ ಕಾಲಿಗೆ ಗುಂಡು ಹೊಕ್ಕಿದ್ದು ಪೊಲೀಸರು ಇರ್ಫಾನ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಲಬುರಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.