ಶಹಾಪುರಃ ಗಾಂಜಾ ಜಪ್ತಿ ಮೂವರ ಬಂಧನ
ಯಾದಗಿರಿ, ಶಹಾಪುರಃ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು 407 ಗೂಡ್ಸ್ ಆಟೋವೊಂದರಲ್ಲಿ ತಾಲೂಕಿನ ದೋರನಹಳ್ಳಿ ಮಾರ್ಗದಿಂದ ನಗರದ ಕಡೆಗೆ ಹೊರಟಿದ್ದ ವಾಹನ ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ರವಿವಾರ ನಡೆದಿದೆ.
ನಗರ ಕಡೆಗೆ ಹೊರಟ್ಟಿ ಗೂಡ್ಸ್ ಆಟೋದಲ್ಲಿ ಪಪ್ಪಾಯಿ ಹಣ್ಣು ಸಾಗಾಣಿಕೆ ಜೊತೆ ಗಾಂಜಾ ಅಕ್ರಮವಾಗಿ ಸಾಗಿಸುತ್ತಿರುವದು ತಿಳಿದು ಬಂದಿದೆ. ವಾಹನ ತಡೆದು ಪೊಲೀಸರು ಪರಿಶೀಲಿಸಲಾಗಿ ಆಟೋದಲ್ಲಿ 3000 ಕೆಜಿ ಪಪ್ಪಾಯಿ ಹಣ್ಣು ಅಂದಾಜು 18 ಸಾವಿರ ಮೌಲ್ಯದ್ದು, ಜೊತೆಗೆ 5 ಕೆಜಿ 300 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅಂದಾಜು 55 ಸಾವಿರ ರೂ,ಮೌಲ್ಯದ್ದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಜೊತೆಗೆ ಆರೋಪಿತರಿಂದ 20 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಾದ ನಿಂಗಪ್ಪ ಬಾಣತಿಹಾಳ ತಾ.ಶಹಾಪುರ, ಜುಬೇರ ಕೆಮ್ಮೆಂಜಿ ತಾಲೂಕು ಪುತ್ತೂರ ಮತ್ತು ಮಹ್ಮದ್ ಸೋಫಿಯಾನ್ ಸಾ.ಉಳಿಮಾವು ಬೆಂಗಳೂರ ಮೂಲದವರೆನ್ನಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.