ಪ್ರಮುಖ ಸುದ್ದಿ
ಪೊಲೀಸ್ ದಾಳಿ ಗಾಂಜಾ ಬೆಳೆ ಜಪ್ತಿಃ ಆರೋಪಿ ಪರಾರಿ
65 ಸಾವಿರ ಮೌಲ್ಯದ ಕಚ್ಚಾ ಗಾಂಜಾ ಬೆಳೆ ಜಪ್ತಿ
yadgiri, ಶಹಾಪುರ: ತಾಲ್ಲೂಕಿನ ಶೆಟ್ಟಿಕೇರಾ ಗ್ರಾಮದಲ್ಲಿ ಅಕ್ರಮವಾಗಿ ತೊಗರಿ ಬೆಳೆಯಲ್ಲಿ ಗಾಂಜಾ ಬೆಳೆ ಬೆಳೆದಿರುವುದನ್ನು ಶನಿವಾರ ಪತ್ತೆ ಹಚ್ಚಿದ ಪೊಲೀಸರು 65,400 ಮೌಲ್ಯದ ಗಾಂಜಾ ಬೆಳೆಯನ್ನು ಜಪ್ತಿ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ವನದುರ್ಗ ಗ್ರಾಮದ ಈರಣ್ಣಗೌಡ ರಾಮಚಂದ್ರಯ್ಯ ಕಲಾಲ್(55) ಎಂಬಾತನೇ ಗಾಂಜಾ ಬೆಳೆ ಬೆಳೆಯುತ್ತಿದ್ದ ಎಂದು ಗುರುತಿಸಲಾಗಿದೆ. ಪೊಲೀಸರ ದಾಳಿ ವೇಳೆ ಆರೋಪಿ ಪರಾರಿಯಾಗಿದ್ದು ತನ್ನ ಹೊಲದಲ್ಲಿ ಅಕ್ರಮವಾಗಿ ತೊಗರಿ ಹೊಲದಲ್ಲಿ 57 ಗಾಂಜಾ ಗಿಡ ಇದ್ದವು ಎಂದು ಪೊಲೀಸರು ತಿಳಿಸಿದರು.
ಡಿವೈಎಸ್ಪಿ ವೆಂಕಟೇಶ ಹುಗಿಂಬಂಡಿ ಹಾಗೂ ಸಿಪಿಐ ಶ್ರೀನಿವಾಸ ಅಲ್ಲಾಪುರ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
—————