ಪ್ರಮುಖ ಸುದ್ದಿ
ಪೊಲೀಸ್ ಪೇದೆ ಕಿರುಕುಳ ಹಿನ್ನೆಲೆ ಯುವಕ ನೇಣಿಗೆ ಶರಣು!
ಕಲಬುರಗಿ: ಪೊಲೀಸ್ ಪೇದೆಯ ಕಿರುಕುಳ ತಾಳದೆ ಯುವಕ ರಮೇಶ ತಳವಾರ್ (24) ನೇಣಿಗೆ ಶರಣಾದ ಘಟನೆ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ಕಿರಾಣಿ ಅಂಗಡಿ ವ್ಯಾಪಾರಿ ಆಗಿದ್ದ ರಮೇಶ ಕೆಲ ದಿನದ ಹಿಂದೆ ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಹೋಗಿದ್ದನಂತೆ. ಅದನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದ ಮಲ್ಲು ಬಾಸಗಿ ಎಂಬ ಪೇದೆ ರಮೇಶ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಜೇವರ್ಗಿ ಪೊಲೀಸ್ ಠಾಣೆಯ ಪೇದೆ ಮಲ್ಲು ಭಾಸಗಿ ಪದೇ ಪದೇ ರಮೇಶನ ಮನೆಗೆ ತೆರಳಿ ಕಿರುಕುಳ ನೀಡುತ್ತಿದ್ದ. ಪರಿಣಾಮ ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದ ರಮೇಶ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದಾಗಿ ರಮೇಶ ತಳವಾರ ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಬಯಲಾಗಬೇಕಿದೆ.