ಪ್ರಮುಖ ಸುದ್ದಿ
ಬಂಧಿತ ಸಂಸದ ಪ್ರತಾಪ ಸಿಂಹರನ್ನು ಊರು ಸುತ್ತಿಸುತ್ತಿರುವ ಪೊಲೀಸರು?
ಮೈಸೂರು : ಹುಣಸೂರು ಪಟ್ಟಣದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಹನುಮ ಜಯಂತಿ ಅಂಗವಾಗಿ ಮೆರವಣಿಗೆಗೆ ಮುಂದಾಗಿದ್ದು ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿ ಕಾರು ಚಾಲನೆ ಮಾಡಿ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿರುವ ಆರೋಪದ ಮೇಲೆ ಮೈಸೂರು ಸಂಸದ ಪ್ರತಾಪ ಸಿಂಹರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಸದ ಪ್ರತಾಪ ಸಿಂಹ ಪೊಲೀಸರು ನೀಡಿದ ಆಹಾರ ಸೇವಿಸದೆ ಪ್ರತಿಭಟನೆ ಮಾಡಿದ್ದು ಹನುಮ ಜಯಂತಿ ಮೆರವಣಿಗೆಗೆ ಅವಕಾಶ ಕಲ್ಪಿಸುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಪೊಲೀಸರು ಪ್ರತಾಪ ಸಿಂಹ ವಿರುದ್ಧ ಈಗಾಗಲೇ ಬಿಳಿಕೆರೆ ಠಾಣೆಯಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ನಿರ್ಲಕ್ಷದ ಚಾಲನೆ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಹುಣಸೂರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.
ಆದರೆ, ಎಎಸ್ಪಿ ರುದ್ರಮುನಿ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಪ್ರತಾಪ ಸಿಂಹರನ್ನು ಪೊಲೀಸ್ ಕಾರಿನಲ್ಲಿ ಕೂಡಿಸಿಕೊಂಡು ಹುಣಸೂರಿನಿಂದ ಹೆಚ್.ಡಿ.ಕೋಟೆ, ಮೈಸೂರು, ನಂಜನಗೂಡು ಅಂತ ಸುತ್ತು ಹಾಕುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.