ಪ್ರಮುಖ ಸುದ್ದಿ
ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಲು ಮೋದಿ ಕರೆ
ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
ವಿವಿ ಡೆಸ್ಕ್ಃ ಕಳೆದ ವರ್ಷ, ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಲಾಯಿತು. ಈ ಸ್ಮಾರಕವು ಸ್ಫೂರ್ತಿ ಮತ್ತು ಕೃತಜ್ಞತೆಯ ಸ್ಥಳವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮೂಲಕ ತಿಳಿಸಿದ್ದಾರೆ.
ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ವಂದನೆ ಸಲ್ಲಿಸಿದ ಅವರು, ಈ ಸ್ಮಾರಕ ನಮ್ಮ ಪೊಲೀಸ್ ಪಡೆಗಳ ಶೌರ್ಯವನ್ನು ನೆನಪಿಸುತ್ತದೆ. ಭಾರತದ ನಾಗರಿಕರು ಸಾಧ್ಯವಾದಾಗಲೆಲ್ಲಾ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡುವಂತೆ ಟ್ವಿಟ್ ಮೂಲಕ ಕರೆ ನೀಡಿದ್ದಾರೆ.