ಯಾದಗಿರಿಃ ಲಾಕ್ ಡೌನ್ ಸಡಿಲಿಕೆ ಏನಿದೆ.? ಎಷ್ಟು ಗಂಟೆವರೆಗೆ .?
ಬೆಳಗ್ಗೆ 4 ರಿಂದ ಮದ್ಯಾಹ್ನ 3 ದಿನಸಿ, ತರಕಾರಿ, ಹಣ್ಣು, ಹಂಪಲು ವ್ಯಾಪಾರಕ್ಕೆ ಅಸ್ತು
ಯಾದಗಿರಿಃ ಏಪ್ರೀಲ್ 22 ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ಸರಳೀಕರಣಗೊಳಿಸಿ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ.
ಅದರಂತೆ ಯಾದಗಿರಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ಹೊಸ ಆದೇಶ ಜಾರಿಗೆ ತಂದಿದ್ದಾರೆ.
ಬೆಳಗ್ಗೆ 4 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೂ ದಿನಸಿ, ತರಕಾರಿ, ಹಾಲು ಹಣ್ಣು ಹಂಪಲು ಮಾರಾಟ ಸೇರಿದಂತೆ ಇತರೆ ಅಗತ್ಯ ಸಾಮಾಗ್ರಿಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಅದರಂತೆ ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ಗಂಟೆವರೆಗೆ ಕೃಷಿ ಚಟುವಟಿಕೆಗೆ ಬೇಕಾದ ರಸಗೊಬ್ಬರ, ಕ್ರಿಮಿನಾಶಕ ಇತರೆ ಯಂತ್ರೋಪಕರಣ, ದುರಸ್ಥಿ ಅಂಗಡಿಗಳು ಸೇರಿದಂತೆ ಇತರೆ ಸಾಮಾಗ್ರಿ ಮಾರಾಟಮಾಡುವ, ಚಿಲ್ಲರೆ ಅಂಗಡಿಗಳ ವಹಿವಾಟು ನಡೆಸಲು ಅನುಮತಿಸಲಾಗಿದೆ.
ಆದರೆ ಈಗಾಗಲೆ ಕಂಟೈನ್ಮೆಂಟ್ ಝೋನ್ ಹೊಂದಿರುವ ವಲಯಕ್ಕೆ ಈ ಆದೇಶ ಅನ್ವಯವಾಗುವದಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಲಾಕ್ ಡೌನ್ ನಿಯಮ ಎಲ್ಲರು ಪಾಲಿಸಬೇಕು.
ಅಗತ್ಯ ಎನಿಸದಲ್ಲಿ ಮಾತ್ರ ಒರ್ವರು ಹೊರಗಡೆ ಬರಬೇಕು. ಅನಗತ್ಯ ಸಂಚಾರ ಮಾಡಕೂಡದು. ಅಂತರ ಜಿಲ್ಲಾ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.