POST OFFICE- SCHEME ಪೋಸ್ಟ್ ಆಫೀಸ್ನಲ್ಲಿ…… ಠೇವಣಿ ಇಡಿ ಮಾಸಿಕ 9250/- ಪಡೆಯಿರಿ
ಅಂಚೆ ಕೇಚರಿಃ ಉಳಿತಾಯ ಯೋಜನೆಗಳೇನು..? ಗೊತ್ತಾ..?

POST OFFICE- SCHEME
ಪೋಸ್ಟ್ ಆಫೀಸ್ನಲ್ಲಿ……
ಠೇವಣಿ ಇಡಿ ಮಾಸಿಕ 9250/- ಪಡೆಯಿರಿ
ಅಂಚೆ ಕೇಚರಿಃ ಉಳಿತಾಯ ಯೋಜನೆಗಳೇನು..? ಗೊತ್ತಾ..?
ವಿವಿ ಡೆಸ್ಕ್ಃ ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ನಿಮಗೆ ಅಗತ್ಯವಾಗಿರುವ ಯೋಜನೆ ಕುರಿತು ಅಂಚೆ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು.
ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ… ಹೀಗೆ ವಿವಿಧ ಉಳಿತಾಯ ಸ್ಕೀಮ್ ಗಳು ಜಾರಿಯಲ್ಲಿವೆ. ಆದರೆ ಸಮಗ್ರ ಮಾಹಿತಿ ಕೊರತೆ ಇರುವ ಕಾರಣ ನಾಗರಿಕರು ಅಂಚೆ ಕಚೇರಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಸು ಸದುಪಯೋಗ ಪಡೆಯಬೇಕು.
ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ ಕುರಿತು. ಕಳೆದ ವರ್ಷದ ಅಂದರೆ 2023ರ ಬಜೆಟ್ನಲ್ಲಿ ಘೋಷಣೆಯಾಗಿರುವ ಇದರ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿಲ್ಲ.
ಮಾಸಿಕವಾಗಿ ಒಂದಿಷ್ಟು ಹಣ ಬರಬೇಕೆಂಬ ಯೋಚನೆ ನಿಮ್ಮದಾಗಿದ್ದರೆ ನೀವು ಪ್ರತಿ ತಿಂಗಳೂ ₹9,250 ರೂಪಾಯಿವರೆಗೆ ಹಣವನ್ನು ಪಡೆಯಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಇಲ್ಲಿಯವರೆಗೆ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಲ್ಲಿ ಗರಿಷ್ಠ 4.5 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡಬಹುದಿತ್ತು. ಆದರೆ ಈಗ ಈ ಮಿತಿ 9 ಲಕ್ಷದವರೆಗೆ ಏರಿಕೆ ಮಾಡಿರುವ ಹಿನ್ನೆಲೆ ಅತಿ ಹೆಚ್ಚಿನ ಮಾಸಿಕ ಲಾಭ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಮನೆಯ ಒಬ್ಬರೇ ಸದಸ್ಯರು ಬಯಸಿದರೆ, 9 ಲಕ್ಷದ ವರೆಗೆ ಹೂಡಿಕೆ ಮಾಡಬಹುದು, ಜಂಟಿಯಾಗಿದ್ದರೆ 15 ಲಕ್ಷದವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ 1 ಸಾವಿರ ರೂಪಾಯಿಯಿಂದ ಗರಿಷ್ಠ 15 ಲಕ್ಷ ರೂಪಾಯಿವರೆಗೆ (ಜಂಟಿಯಾಗಿದ್ದರೆ) ಹೂಡಿಕೆ ಮಾಡಲು ಅವಕಾಶವಿದೆ.
ಪ್ರಸ್ತುತ ಬಡ್ಡಿ ದರವು ಶೇ 7.4 ರಷ್ಟು ಇದೆ. ಬಡ್ಡಿ ಪ್ರತಿ ತಿಂಗಳ ಕೊನೆಗೆ ನಿಮಗೆ ಲಭಿಸಲಿದೆ.
ಅಂಚೇ ಕಚೇರಿಯಲ್ಲಿ ನಿಮ್ಮ ಠೇವಣಿಗೆ ಭದ್ರತೆ ದೊರೆಯಲಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಯಾವುದೇ ಖಾಸಗಿ ಸಹಕಾರಿ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟರೆ ಯಾವಾಗ ಆ ಸಹಕಾರಿ ಬ್ಯಾಂಕ್ ಗಳು ಬಾಗಿಲು ಹಾಕುತ್ತವೆ ಗೊತ್ತಿಲ್ಲ. ಅಂತಹ ಬ್ಯಾಂಕ್ ಗಳಲ್ಲಿ ಠೇವಣೆ ಇಟ್ಟರೆ ಯಾವುದೇ ಭದ್ರತೆ ದೊರೆಯುವದಿಲ್ಲ. ಕಾರಣ ತಡಮಾಡದೆ ಅಂಚೆ ಕಚೇರಿಗೆ ಭೇಟಿ ನೀಡಿ ಉಳಿತಾಯ ಯೋಜನೆಯ ಲಾಭ ಪಡೆಯಿರಿ ಏನಂತೀರ್ರಿ..