ಪ್ರಮುಖ ಸುದ್ದಿ
ವಿದ್ಯುತ್ ತಂತಿ ತಗುಲಿ ವ್ಯಕ್ತಿ ಬಲಿಃ ತೆಂಗಿನ ಮರದ ಕೊಂಬೆ ಕಡಿಯುವಾಗ ನಡೆದ ಘಟನೆ
ಯಾದಗಿರಿಃ ತೆಂಗಿನ ಮರದ ಕೊಂಬೆಗಳು ಕತ್ತರಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸರ್ವೀಸ್ ವೈರ್ ತಗುಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಶನಿವಾರ (ಜ.13) ನಡೆದಿದೆ.
ಬಡೇಸಾಬ ವಡವಡಗಿ (45) ಮೃತ ವ್ಯಕ್ತಿಯಾಗಿದ್ದಾನೆ. ಘಟನೆಗೆ ಜೆಸ್ಕಾಂ ಅಧಿಕಾರಿಗ ನಿರ್ಲಕ್ಷವೇ ಕಾರಣ ಎಂದು ಆರೋಪ ಕೇಳಿ ಬಂದಿದೆ. ಮನೆ ಮೇಲಿನ ವಿದ್ಯುತ್ ತಂತಿ ತೆಗೆಯುವಂತೆ ಸಾಕಷ್ಟು ಬಾರಿ ಜೆಸ್ಕಾಂ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಹುಣಸಿಗಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.