Home
ನಾಳೆ ಶನಿವಾರ ಮುಡಬೂಳ, ಮದ್ರಿಕಿ ಭಾಗ ವಿದ್ಯುತ್ ವ್ಯತ್ಯಯ
ನಾಳೆ ಶನಿವಾರ ಮುಡಬೂಳ, ಮದ್ರಿಕಿ ಭಾಗ ವಿದ್ಯುತ್ ವ್ಯತ್ಯಯ
yadgiri, ಶಹಾಪುರಃ ನಿರಂತರ ವಿದ್ಯುತ್ ಪೂರೈಸಲು ಮತ್ತು ಯಾವುದೇ ಅವಘಡ ಆಗದಂತೆ ತಡೆಯಲು 110ಕೆವಿ ಶಹಾಪುರ-ಶಹಾಬಾದ್ ವಿದ್ಯುತ್ ಮಾರ್ಗ ವಿದ್ಯುತ್ ತಂತಿ ಬದಲಾವಣೆ ಕೆಲಸ ನಿರ್ವಹಿಸುತ್ತಿರುವ ಕಾರಣ ಶನಿವಾರ 2022 ಫೆ.05 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ ಗಂಟೆಯವರೆಗೆ 11ಕೆವಿ ಮುಡಬೂಳ ಎನ್.ಜೆ.ವೈ.ಫೀಡರ್ ಮತ್ತು 11ಕೆವಿ ಮದ್ರಿಕಿ ಐಪಿಸೆಟ್ ಫೀಡರ್‍ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಕೆಲಸ ಮಾಡಲಾಗುತ್ತಿದೆ. ಕಾರಣ ಮುಡುಬೂಳ ಮತ್ತು ಮದ್ರಿಕಿ ಭಾಗದ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
————-