ಶಹಾಪುರಃ ಆಸ್ಪತ್ರೆ ಖರ್ಚು ವೆಚ್ಚ ಸರ್ಕಾರ ಭರಿಸಲಿದೆ – ಪ್ರಭು ಚವ್ಹಾಣ
ಮೃತರ ಮನೆಗಳಿಗೆ ಸಚಿವ ಪ್ರಭು ಚವ್ಹಾಣ ಭೇಟಿ ಸಾಂತ್ವನ
ಸರ್ಕಾರ ನಿಮ್ಮೊಂದಿಗಿದೆ ಭಯ ಬೇಡ
ಆಸ್ಪತ್ರೇ ಖರ್ಚು ವೆಚ್ಚ ಸರ್ಕಾರ ಭರಿಸಲಿದೆ – ಪ್ರಭು ಚವ್ಹಾಣ
yadgiri, ಶಹಾಪುರಃ ಸಿಲಿಂಡರ್ ಸ್ಪೋಟದಿಂದಾದ ಅನಾಹುತ ನಿಜಕ್ಕೂ ದೊಡ್ಡ ದುರಂತವೇ ಸರಿ. ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಲಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಎಲ್ಲಾ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಫೆ.25 ರಂದು ಸಾಹೇಬಗೌಡ ಎಂಬುವವರ ಮನೆಯ ಸೀಮಂತ ಕಾರ್ಯಕ್ರಮದ ಸಮಾರಂಭದಲ್ಲಿ ಸಿಲಿಂಡರ್ ಅನೀಲ ಸೋರಿಕೆಯಿಂದ ಸ್ಪೋಟಗೊಂಡು 24 ಜನರು ಗಂಭೀರ ಗಾಯಕ್ಕೆ ಒಳಗಾಗಿದ್ದರು. ಈ ಪೈಕಿ ಐದು ಜನರು ಮೃತರಾಗಿದ್ದು ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಅಲ್ಲದೆ ವಯಕ್ತಿಕವಾಗಿ ಸಹಾಯ ನೀಡಿದ ಅವರು ಘಟನೆಯ ಬಗ್ಗೆ ಕುರಿತು ಅನುಭವಿಕ ನುಡಿಗಳನ್ನು ಆಲಿಸಿದರು.
ಈ ವೇಳೆ ಘಟನೆಗೆ ವಿಷಾದ ವ್ಯಕ್ತಪಡಿಸಿದ ಅವರು, ಮೃತರ ಕುಟುಂಬಗಳಿಗೆ ಸರ್ಕಾರದಿಂದ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮತ್ತು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಕುರಿತು ಸಿಎಂ ಬೊಮ್ಮಾಯಿ ಅವರೊಂದಿಗೆ 20 ನಿಮಿಷಗಳ ಚರ್ಚೆ ನಡೆಸಿದ್ದು, ಅವರು ನನಗೆ ಖುದ್ದಾಗಿ ಹೋಗಿ ಘಟನೆ ಬಗ್ಗೆ ಸಂಪೂರ್ಣ ವಿವರ ಪಡೆದುಕೊಂಡು ನೊಂದ ಕುಟುಂಬಸ್ಥರ ನೆರವಿಗೆ ನಿಲ್ಲುವಂತೆ ಸೂಚನೆ ನಿಡಿದ್ದಾರೆ ಎಂದರು.
ಘಟನೆ ಬಗ್ಗೆ ಸೂಕ್ತ ತನಿಖೆ ಮುಂದುವರೆದಿದ್ದು, ಅಲ್ಲದೆ ಸಿಲಿಂಡರ್ ಸ್ಪೋಟಕ್ಕೆ ಕಾರಣ ಕುರಿತು ತನಿಖೆ ನಡೆಯುತ್ತಿದೆ. ಏಜೆನ್ಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಯಾವುದೇ ಕಾರಣಕ್ಕೂ ಕೈಬಿಡುವ ಪ್ರಮೇಯವೇ ಇಲ್ಲ. ಈ ಬಗ್ಗೆ ವಿಶೇಷ ಕಾಳಜಿವಹಿಸಲಾಗಿದ್ದು, ಸಿಲಿಂಡರ್ ವಿಮೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸಂಸದ ರಾಜಾ ಅಮರೇಶ್ವರ ನಾಯಕ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಿಲ್ಲಾಧಿಕಾರಿ ಡಾ.ಆರ್.ರಾಗಪ್ರಿಯಾ, ಡಿಎಸ್‍ಪಿ ಡಾ.ದೇವರಾಜ, ಪಿಐ ಶ್ರೀನಿವಾಸ ಅಲ್ಲಾಪುರ, ಪಿಎಸ್‍ಐ ಚಂದ್ರಕಾಂತ ಮೆಕಾಲೆ, ಎಸ್‍ಐ ಹೊನ್ನಪ್ಪ ಭಜಂತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೋಪಾಲರೆಡ್ಡಿ ನಾಯ್ಕಲ್, ಚಂದ್ರಶೇಖರಗೌಡ ಮಾಗನೂರ, ಪರಶುರಾಮ ಕುರಕುಂದಿ, ದೇವೇಂದ್ರ ನಾದ್, ವೆಂಕಟರೆಡ್ಡಿ ಅಬ್ಬೆತುಮಕೂರ, ಗೋವಿಂದಪ್ಪ ಕೊಂಚೆಟ್ಟಿ ಸೇರಿದಂತೆ ಇತರರು ಇದ್ದರು.
ಸಿಲಿಂಡರ್ ಸ್ಪೋಟದಿಂದ ನಿಮಗಾದ ನೋವು ಬರಿ ನಿಮ್ಮದಲ್ಲ ಅದು ನಮ್ಮ ನೋವು. ನಿಮ್ಮೊಂದಿಗೆ ನಾನು ಮಾತ್ರವಲ್ಲ ಸಚಿವರು ಸೇರಿದಂತೆ ಇಡಿ ಸರ್ಕಾರ ಮತ್ತು ಅಧಿಕಾರಿ ವರ್ಗ ನಿಮ್ಮೊಂದಿಗಿದೆ. ಯಾವುದೇ ಆತಂಕ ಭಯ ಪಡುವ ಅಗತ್ಯವಿಲ್ಲ. ಆಸ್ಪತ್ರೆಗಳಲ್ಲಿ ಕಾಳಜಿಪೂರ್ವಕವಾಗಿ ಚಿಕಿತ್ಸೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ವೈದ್ಯರಿಗೂ ಸೂಚಿಸಲಾಗಿದೆ. ನಿರಂತರ ಜಿಲ್ಲಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ, ಎಲ್ಲರೂ ಧೈರ್ಯದಿಂದ ಇರಿ.
-ವೆಂಕಟರಡ್ಡಿ ಮುದ್ನಾಳ. ಶಾಸಕ. ಯಾದಗಿರಿ.