ಪ್ರಮುಖ ಸುದ್ದಿ
ವಿಶ್ವನಾಥ ಅವರೇಳಿರುವದು ಬಿಜೆಪಿ ನಿಲುವಲ್ಲ, ಅದು ವಯಕ್ತಿಕ ಹೇಳಿಕೆ- ರಾಜೂಗೌಡ
ವಿಶ್ವನಾಥ ಅವರೇಳಿರುವದು ಬಿಜೆಪಿ ನಿಲುವಲ್ಲ, ಅದು ವಯಕ್ತಿಕ ಹೇಳಿಕೆ- ರಾಜೂಗೌಡ
ಯಾದಗಿರಿಃ ಟಿಪ್ಪು ಕುರಿತು ಎಚ್.ವಿಶ್ವನಾಥ ಅವರು ನೀಡಿರುವ ಹೇಳಿಕೆ ಅವರ ವಯಕ್ತಿಕ ನಿಲುವಾಗಿದೆ. ಆದರೆ ಬಿಜೆಪಿ ನಿಲುವಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಾಸಕ, ನಗರ ಒಳಚರಂಡಿ, ನೀರು ಸರಬರಾಜು ಮಂಡಳಿ ಅಧ್ಯಕ್ಷ ರಾಜೂಗೌಡ ತಿಳಿಸಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಪಾಪ ವಿಶ್ವನಾಥ ಬಹುಕಾಲದಿಂದ ಕಾಂಗ್ರೆಸ್ ನಲ್ಲಿ ಇದ್ದವರು,ಆ ಮೇಲೆ ಜೆಡಿಎಸ್ ಗೆ ಹೋದವರು. ಬಿಜೆಪಿಯಲ್ಲಿ ಹೊಂದಿಕೊಳ್ಳಲು ಇನ್ನೂ ಸಮಯ ಬೇಕಾಗುತ್ತದೆ ಎಂದರು.